ರೈಲ್ವೆ ಕಾರ್ಯಾಚರಣೆ ಪರಿಶೀಲಿಸಿದ ವಿ. ಸೋಮಣ್ಣ railway

railway ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ದೆಹಲಿ ವಿಭಾಗದ ನಿಯಂತ್ರಣ ಕಚೇರಿಗೆ ಭೇಟಿ ನೀಡಿದರು. ಡಿಆರ್​ಎಂ ಪುಷ್ಪೇಶ ತ್ರಿಪಾಠಿ ಹಾಗೂ ಇತರರಿದ್ದರು.
railway ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ದೆಹಲಿ ವಿಭಾಗದ ನಿಯಂತ್ರಣ ಕಚೇರಿಗೆ ಭೇಟಿ ನೀಡಿದರು. ಡಿಆರ್​ಎಂ ಪುಷ್ಪೇಶ ತ್ರಿಪಾಠಿ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ ವಿಭಾಗದ ನಿಯಂತ್ರಣ ಕಚೇರಿಗೆ ರೈಲ್ವೆ ರಾಜ್ಯ ಸಚಿವರ ಭೇಟಿ
  • ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ
  • ನಿಯಂತ್ರಣ ಕಚೇರಿಯ ವಿವಿಧ ವಿಭಾಗಗಳ ಕಾರ್ಯ ವೈಖರಿ ಅವಲೋಕಿಸಿದರು.
ರೈಲುಗಳ ಸುರಕ್ಷತೆ, ಕಾರ್ಯುಚರಣೆೆ, ಸಮಯಪಾಲನೆ ಹಾಗೂ ಸಾರ್ವಜನಿಕರಿಂದ ಬಂದಿರುವ ದೂರುಗಳ ಕುರಿತು ಅವರು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಚಿವರು ನಿಯಂತ್ರಣ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.
ದೆಹಲಿ ವಿಭಾಗದ ಡಿಆರ್​ಎಂ ಪುಷ್ಪೇಶ ತ್ರಿಪಾಠಿ ಹಾಗೂ ಅವರ ತಂಡದೊಂದಿಗೆ ರೈಲ್ವೆ ಕಾರ್ಯುಚರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ರೈಲುಗಳ ಸಂಚಾರ, ನಿರ್ವಹಣಾ ಯೋಜನೆ, ಮೇಲ್ವಿಚಾರಣೆ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಯಂತ್ರಣ ಕಚೇರಿಯಲ್ಲಿ ದಿನದ 24 ಗಂಟೆಯೂ ನಿರಂತರವಾಗಿ ಗಮನಿಸಲಾಗುತ್ತದೆ. ಈ ಕಾರ್ಯಗಳು ವಾರದ ಏಳು ದಿನಗಳು ಹಾಗೂ ವರ್ಷದ 365 ದಿನಗಳೂ ನಡೆಯುತ್ತವೆ.
ಸೆಕ್ಷನ್ ಕಂಟ್ರೋಲರ್​ಗಳ ಕಾರ್ಯವೈಖರಿ ಪರಿಶೀಲಿಸಲಾಯಿತು. ಇಂಜಿನಿಯರಿಂಗ್, ಕೋಚಿಂಗ್, ಗೂಡ್ಸ್, ವಾಣಿಜ್ಯ, ಸಿಗ್ನಲ್ ಮತ್ತು ಟೆಲಿಕಾಂ, ಟ್ರಾಕ್ಷನ್ ಹಾಗೂ ಭದ್ರತಾ ನಿಯಂತ್ರಣ ಸೇರಿ ನಿಯಂತ್ರಣ ಕಚೇರಿಯ ವಿವಿಧ ವಿಭಾಗಗಳ ಕಾರ್ಯ ವೈಖರಿ ಅವಲೋಕಿಸಿದರು.
ಅತ್ಯಾಧುನಿಕ ಸೂಪರ್​ವೈಸರಿ ಕಂಟ್ರೋಲ್ ಆಂಡ್ ಡೇಟಾ ಅಕ್ವಿಸಿಷನ್ ಕೇಂದ್ರ ಹಾಗೂ ದೆಹಲಿ ವಿಭಾಗದ ವಾರ್ ರೂಮ್ೂ ಭೇಟಿ ನೀಡಿದರು.
ಕಾರ್ಯುಚರಣೆ, ಸುರಕ್ಷತೆ ಹಾಗೂ ನಿರ್ವಹಣಾ ಮೇಲ್ವಿಚಾರಣೆ ಸೇರಿ ರೈಲ್ವೆಯ ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬಳಕೆ ವೇಗವಾಗಿ ಹೆಚ್ಚುತ್ತಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.
ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಮಾನವ ತಪ್ಪುಗಳನ್ನು ಕಡಿಮೆ ಮಾಡುವುದರ ಜತೆಗೆ ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡಿವೆ.
ಮುಂದಿನ ದಿನಗಳಲ್ಲಿ ಮೇಕ್ ಇನ್ ಇಂಡಿಯಾ ಸೇರಿದಂತೆ ವಿವಿಧ ನೀತಿ ಉಪಕ್ರಮಗಳ ಮೇಲೆ ನಿರಂತರ ಗಮನ ಹರಿಸುವ ಮೂಲಕ ಈ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net