urban bank ಹುಬ್ಬಳ್ಳಿ ಅರ್ಬನ್ ಕೋ ಆಪ್ ಬ್ಯಾಂಕಿನಲ್ಲಿ ಎಂಎಲ್ಸಿ ಲಿಂಗರಾಜ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಸಾವಕಾರ, ಗಿರೀಶಭಾಯ್ ಉಪಾಧ್ಯಾಯ, ಆನಂದ ಮನಗೂಳಿ, ಬಸವರಾಜ ತೇರದಾಳ, ವೆಂಕಟೇಶ ಉಪ್ಪಾರ, ಇತರರು ಇದ್ದರು.
Published on:
Copied
Follow Us
ಹುಬ್ಬಳ್ಳಿ: urban bank ನಗರದ ಹುಬ್ಬಳ್ಳಿ ಅರ್ಬನ್ ಕೋ ಆಪ್ ಬ್ಯಾಂಕಿನ ಮಾಜಿ ಉಪಾಧ್ಯ ಲಿಂಗರಾಜ ಪಾಟೀಲ ಇವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬ್ಯಾಂಕಿನಲ್ಲಿ ಸನ್ಮಾನಿಸಲಾಯಿತು. ಬ್ಯಾಂಕಿನ ನಿರ್ದೇಶಕ ಮಂಡಳಿಯವರು ಪಾಟೀಲ ಅವರನ್ನು ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.
ಬ್ಯಾಂಕಿನ ಹಿರಿಯ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ ಮಾತನಾಡಿ, ಲಿಂಗರಾಜ ಪಾಟೀಲ ಅವರು ಬ್ಯಾಂಕಿನ ಉಪಾಧ್ಯಕ್ಷರಾಗಿ ಬ್ಯಾಂಕಿನ ಏಳಿಗೆಗಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ, ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಮಾಜ ಮುಖಿಯಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಲಿಂಗರಾಜ ಪಾಟೀಲ ಅವರು, ಪರಿಷತ್ ಸದಸ್ಯನಾಗಿ ನಿಷ್ಠೆ ಹಾಗೂ ಪ್ರಾಮಾಣಿಕನಾಗಿ ಕಾರ್ಯನಿರ್ವಹಿಸುತ್ತೇನೆ. ಬ್ಯಾಂಕಿನ ಯಾವುದೇ ಸಮಸ್ಯೆಗೆ ಸ್ಪಂದಿಸುತ್ತೇನೆ. ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಉಪಾಧ್ಯಕ್ಷ ಗಿರೀಶಭಾಯ್ ಉಪಾಧ್ಯಾಯ ಮಾತನಾಡಿ, ಲಿಂಗರಾಜ ಪಾಟೀಲ ಅವರು ಶಿಸ್ತಿನ ವ್ಯಕ್ತಿಗಳು, ಅವರು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇನ್ನೂ ಹೆಚ್ಚಿನ ಸಮಾಜ ಸೇವೆ ಅವರಿಂದ ಆಗಲಿ ಎಂದರು.
ನಿರ್ದೇಶಕರಾದ ಆನಂದ ಮನಗೂಳಿ, ವೆಂಕಟೇಶ ಉಪ್ಪಾರ, ಮಹೇಶ ಬುರಲಿ, ಸ್ಮೃತಿ ಕೊರ್ಲಹಳ್ಳಿ, ಸದಾಶಿವ ಕಾರಡಗಿ, ಬಸವರಾಜ ತೇರದಾಳ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಖಲೀದ್ ಅಹ್ಮದ ಜಮಾದಾರ, ಸಂಗಪ್ಪ ಮಿತ್ತಲಕೊಡ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಮುಖ್ಯ ಶಾಖೆಯ ವ್ಯವಸ್ಥಾಪಕ ಸುಧೀಂದ್ರ ರಾಯಚೂರ ವಂದಿಸಿದರು.