ತಿರಂಗದ ಗೌರವ ನಮ್ಮ ಹೊಣೆ

ಧಾರವಾಡ ಜೆಎಸ್ ಎಸ್ ನಲ್ಲಿ ತಿರಂಗಾ ಧ್ವಜ ವಿನ್ಯಾಸ ಪ್ರದರ್ಶನ' ನಡೆಯಿತು.
ಧಾರವಾಡ ಜೆಎಸ್ ಎಸ್ ನಲ್ಲಿ ತಿರಂಗಾ ಧ್ವಜ ವಿನ್ಯಾಸ ಪ್ರದರ್ಶನ' ನಡೆಯಿತು.
Published on
ಧಾರವಾಡ: ತಿರಂಗ ನಮ್ಮ ಹೆಮ್ಮೆ, ಸ್ವಾತಂತ್ರ‍್ಯ ನಮ್ಮ ಉಸಿರು. ಧ್ವಜ ಹಾರಿಸುವುದು ಕೇವಲ ಒಂದು ಆಚರಣೆಯಲ್ಲ; ರಾಷ್ಟ್ರ ಧ್ವಜದ ಗೌರವ ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ವಿದ್ಯಾಗಿರಿಯ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಈಚೆಗೆ ಆಯೋಜಿಸಿದ್ದ `ತಿರಂಗ ಧ್ವಜ ವಿನ್ಯಾಸ ಪ್ರದರ್ಶನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 80ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ರಾಷ್ಟಭಕ್ತಿ ಹಾಗೂ ದೇಶದ ಬಗ್ಗೆ ಹೆಮ್ಮೆಯ ಭಾವನೆ ಬೆಳೆಸುವ ಉದ್ದೇಶದಿಂದ ಸಂಸ್ಥೆಯಲ್ಲಿ `ತಿರಂಗ ಧ್ವಜ ವಿನ್ಯಾಸ ಪ್ರದರ್ಶನ' ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪ್ರದರ್ಶನದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರ ಎಂದರು.
ಸಂಸ್ಥೆಯ ಆಡಳಿತಾಽಕಾರಿ ಅರಿಹಂತ ಪ್ರಸಾದ ಮಾತನಾಡಿ, ತಿರಂಗ ಧ್ವಜ ವಿನ್ಯಾಸ ಪ್ರದರ್ಶನದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸಲು ಸಹಕಾರಿಯಾಗುತ್ತವೆ. ಇಂತಹ ಚಟುವಟಿಕೆಗಳಿಂದ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ ಎಂದರು.
ಸ್ವಾತಂತ್ರ‍್ಯ ಹೋರಾಟದ ಮಹತ್ವ ಹಾಗೂ ದೇಶದ ಸ್ವಾತಂತ್ರ‍್ಯದ ಮೌಲ್ಯವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಹಾಗೂ ರಾಷ್ಟçಧ್ವಜದ ಮಹತ್ವವನ್ನು ಯುವಜನತೆ ಅರಿತುಕೊಳ್ಳುವುದು ಅಗತ್ಯ ಎಂದರು.
ಉಪಪ್ರಾಚಾರ್ಯ ಡಾ. ಸೂರಜ ಜೈನ್, ಮಹಾವೀರ ಉಪಾಧ್ಯೆ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಶೃತಿ ಶೆಟ್ಟಿ, ಪ್ರೊ. ವಿವೇಕ, ಜಿನ್ನಪ್ಪ ಕುಂದಗೋಳ, ಶ್ರವಣ ಯೋಗಿ, ಪ್ರಾಧ್ಯಾಪಕರಾದ ಪ್ರೊ. ಮಹಾಂತ ದೇಸಾಯಿ, ಪ್ರೊ. ಪ್ರಶಾಂತ ಹಕ್ಕಾಪಕ್ಕಿ, ಪ್ರೊ. ವಿನಾಯಕ ಇಂಗಳಗಿ, ಪ್ರೊ. ಸುಮನ ಮೋಟೆ, ಪ್ರೊ. ಸೃಜನಾ ಜೋಶಿ, ಪ್ರೊ. ನಿಧಿ ದೇಶಪಾಂಡೆ, ಪ್ರೊ. ಮಾರುತಿ ಸಿ., ಪ್ರೊ. ಸೌಮ್ಯಾ ಗುಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net