ನಾಲೈ ದಿನದಲ್ಲಿ ಲಿಖಿತ ಪರೀಕ್ಷೆ: ಬಿಸಿಎ, ಬಿಎಸ್‌ಸಿ, ಬಿಬಿಎ ಸೇರಿ ವಿವಿಧ ಕೋರ್ಸ್‌ಗಳಿಗೆ ಈಗಾಗಲೇ ಮೇ 25ರಂದು ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಿದ್ದು, ಜೂ. 6ರವರೆಗೆ ನಡೆಯಲಿವೆ. ಇವುಗಳು ಮುಗಿದ ಬಳಿಕ 4 ದಿನದ ಅಂತರದಲ್ಲಿ (ಜೂ. 10ರಿಂದ) ವಿವಿಧ ಪದವಿ ಕೋಸ್ ೯ಗಳ ಲಿಖಿತ(ಥಿಯರಿ) ಪರೀಕ್ಷೆಗಳನ್ನು ನಿಗದಿಪಡಿಸಿದ್ದರಿಂದ ವಿದ್ಯಾರ್ಥಿಗಳಿಗೆ ಸಮಯ ಸಿಗದಂತಾಗಿದೆ.