ರೈತನ ಜಮೀನಿನಲ್ಲಿ ಕೇಂದ್ರ ಸಚಿವರ ಊಟ

ರೈತನ ಜಮೀನಿನಲ್ಲಿ ಕೇಂದ್ರ ಸಚಿವ ಗಜೇಂದ್ರಸಿಂಗ್​ ಶೇಖಾವತ್​ ಊಟ ಸವಿದರು.
ರೈತನ ಜಮೀನಿನಲ್ಲಿ ಕೇಂದ್ರ ಸಚಿವ ಗಜೇಂದ್ರಸಿಂಗ್​ ಶೇಖಾವತ್​ ಊಟ ಸವಿದರು.
Published on
ಧಾರವಾಡ: ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್​ ಶೇಖಾವತ್​ ಅವರು ತಾಲೂಕಿನ ತೇಗೂರ ಗ್ರಾಮದ ರೈತನ ಜಮೀನಿನಲ್ಲಿ ಮಧ್ಯಾಹ್ನ ಊಟ ಸವಿದರು.
ಕಾರ್ಯನಿಮಿತ್ತ ಬೆಳಗಾವಿಗೆ ತೆರಳಿದ್ದ ಅವರು ಹುಬ್ಬಳ್ಳಿಗೆ ಮರಳುತ್ತಿದ್ದ ವೇಳೆ ತೇಗೂರ ಗ್ರಾಮದ ರೈತ ಹಾಗೂ ಮಾಜಿ ಯೋಧ ರಮೇಶ ಗೋಕಾವಿ ಅವರ ಜಮೀನಿಗೆ ತೆರಳಿದರು. ಜಮೀನಿನಲ್ಲಿ ಕೆಲಕಾಲ ಸುತ್ತಾಡಿ ಬೆಳೆಗಳ ಮಾಹಿತಿ ಪಡೆದರು. ನಂತರ ರೈತರೊಂದಿಗೆ ಜಮೀನಿನಲ್ಲಿ ಕುಳಿತು ಭೋಜನ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net