ಶ್ರೀ ಕ್ಷೇತ್ರ ಉಳವಿಗೆ ಪಾದಯಾತ್ರೆ

ulavi-padayatra
ulavi-padayatra
Published on

ಪ್ರಮುಖ ಮುಖ್ಯಾಂಶಗಳು

  • ಆತ್ಮಾರಾಮ ಸ್ವಾಮೀಜಿ ಸೇರಿ ಅನೇಕ ಸ್ವಾಮೀಜಿಗಳು ಪಾದಯಾತ್ರೆಗೆ ಚಾಲನೆ
  • ನ.30ರಂದು ಶ್ರೀ ಕ್ಷೇತ್ರ ಉಳವಿ ತಲುಪಲಿದೆ
  • ಮಾಜಿ ಶಾಸಕರಾದ ಎ.ಬಿ. ದೇಸಾಯಿ, ಅಮೃತ ದೇಸಾಯಿ ನೇತೃತ್ವ
ಧಾರವಾಡ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಕಲ್ಮಠದ ಉತ್ತರಾಽಕಾರಿ ಶ್ರೀ ಆತ್ಮಾರಾಮ ಸ್ವಾಮೀಜಿ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ದೇವಸ್ಥಾನದವರೆಗೆ ಹಮ್ಮಿಕೊಂಡಿರುವ 9ನೇ ವರ್ಷದ ಪಾದಯಾತ್ರೆ ಗುರುವಾರ ಆರಂಭವಾಯಿತು.
ಗರಗ ಗ್ರಾಮದ ಶ್ರೀ ಮಠದಲ್ಲಿ ಮಡಿವಾಳೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ನಂತರ ವಿವಿಧ ಮಠಾಽÃಶರನ್ನು ಸತ್ಕರಿಸಲಾಯಿತು. ಶ್ರೀ ಮಠದ ಉತ್ತರಾಽಕಾರಿ ಆತ್ಮಾರಾಮ ಸ್ವಾಮೀಜಿ ಸೇರಿ ಅನೇಕ ಸ್ವಾಮೀಜಿಗಳು ಪಾದಯಾತ್ರೆಗೆ ಚಾಲನೆ ನೀಡಿದರು.
ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ನರೇಂದ್ರ ಮಳೆಪ್ಪಜ್ಜನ ಮಠದ ಶ್ರೀ ಸಂಗಮೇಶ್ವರ ದೇವರು, ಸಿಂಗನಹಳ್ಳಿಯ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಗರಗದ ಶ್ರೀ ಕುಮಾರೇಶ್ವರ ಸ್ವಾಮೀಜಿ, ಮುಮ್ಮಿಗಟ್ಟಿ ಶ್ರೀ ಬಸವಾನಂದ ಸ್ವಾಮೀಜಿ, ಮಾಜಿ ಶಾಸಕ ಎ.ಬಿ. ದೇಸಾಯಿ, ಶ್ರೀಮಠದ ಕಾಯÁðಧ್ಯಕ್ಷ ಅಶೋಕ ದೇಸಾಯಿ, ಮÁಜಿ ಶಾಸಕ ಅಮೃತ ದೇಸಾಯಿ, ಪ್ರಿಯಾ ದೇಸಾಯಿ, ಶ್ರೀಮಠದ ಟ್ರಸ್ಟ್ ಕಮಿಟಿ ಪದಾಽಕಾರಿಗಳು, ಸದಸ್ಯರು ಇದ್ದರು.
ಪಾದಯಾತ್ರೆಯಲ್ಲಿ ಮುಖಂಡರಾದ ಶಂಕರ ಮುಗದ, ನಿಜನಗೌಡ ಪಾಟೀಲ, ಮಹೇಶ ಯಲಿಗಾರ, ಕಿರಣ ಬುಲಬುಲೆ, ಸೇರಿ ತಾಲೂಕಿನ ಉಪ್ಪಿನಬೆಟಗೇರಿ, ಹಂಗರಕಿ, ತಡಕೋಡ, ಯಾದವಾಡ, ಹೆಬ್ಬಳ್ಳಿ, ನರೇಂದ್ರ ಇತ್ಯಾದಿ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ಪಾದಯಾತ್ರೆಯು ಮಂಗಳಗಟ್ಟಿ, ನರೇಂದ್ರ , ಧಾರವಾಡ ತಪೋವನ, ನಿಗದಿ, ಹಳಿಯÁಳ, ದಾಂಡೇಲಿ ಮೂಲಕ ನ.30ರಂದು ಶ್ರೀ ಕ್ಷೇತ್ರ ಉಳವಿ ತಲುಪಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net