ಉದ್ಯೋಗಾವಕಾಶ ಕಲ್ಪಿಸುವುದಕ್ಕೆ ಪ್ರಯತ್ನಿಸಿ

ರುಡ್ ಸೆಟ್ ಸಂಸ್ಥೆಯ ತರಬೇತಿ ಕಾರ್ಯಕ್ರಮ
ರುಡ್ ಸೆಟ್ ಸಂಸ್ಥೆಯ ತರಬೇತಿ ಕಾರ್ಯಕ್ರಮ
Published on
ಧಾರವಾಡ: ರುಡ್‌ಸೆಟ್ ಸಂಸ್ಥೆಯು ಆಸಕ್ತ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ಕೌಶಲ ತರಬೇತಿಗಳನ್ನು ನೀಡುತ್ತಿದೆ. ಇನ್ನೂ ಹೆಚ್ಚಿನ ನಿರೂದ್ಯೋಗಿಗಳಿಗೆ ತರಬೇತಿ ನೀಡಿ, ಉದ್ಯೋಗಾವಕಾಶಗಳನ್ನು ಕಲ್ಪಿಸುವುದಕ್ಕೆ ಸಂಸ್ಥೆಯು ನಿರಂತರ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಽಕಾರಿ ಸ್ನೇಹಲ್ ಆರ್. ಸಲಹೆ ನೀಡಿದರು.
ನಗರದ ಜಿಪಂ ಆವರಣದಲ್ಲಿ ಬುಧವಾರ ರುಡ್‌ಸೆಟ್ ಸಂಸ್ಥೆಯಿಂದ 2025-26ನೇ ಸಾಲಿನಲ್ಲಿ ಜರುಗಿದ ತರಬೇತಿ ಕಾರ್ಯಕ್ರಮದ ವಾರ್ಷಿಕ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರುಡ್‌ಸೆಟ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಸಂಸ್ಥೆಯು ಈ ವರ್ಷದಲ್ಲಿ 1,035 ಅಭ್ಯರ್ಥಿಗಳಿಗೆ ವಿವಿಧ ತರಬೇತಿ ನೀಡಿದ್ದು ಅದರಲ್ಲಿ 758 ಅಭ್ಯರ್ಥಿಗಳು ಸ್ವ-ಉದ್ಯೋಗ ಮಾಡುತ್ತಿರುವುದು ಸಂತಸದ ವಿಷಯ. ಮುಂಬರುವ ದಿನಗಳಲ್ಲಿ ಹೈನುಗಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ, ತೋಟಗಾರಿಕೆ, ನರ್ಸರಿ ನಿರ್ವಹಣೆ, ಅಣಬೆ ಬೇಸಾಯ, ಜೇನು ಕೃಷಿಯಂತಹ ಸಮಗ್ರ ಕೃಷಿ ಪದ್ಧತಿ ತರಬೇತಿ ಆಯೋಜಿಸಿ ರೈತರಿಗೆ ನೆರವಾಗಬೇಕು ಎಂದು ತಿಳಿಸಿದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಪೃಥ್ವಿರಾಜ ಜಿ.ಪಿ. ಅವರು, ಸಂಸ್ಥೆಯ 2025-26ನೇ ಸಾಲಿನಲ್ಲಿ ಹಮ್ಮಿಕೊಂಡ ತರಬೇತಿಗಳ ಗುರಿ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.
ರಿಸರ್ವ ಬ್ಯಾಂಕ ಆಫ್ ಇಂಡಿಯಾ ಬೆಂಗಳೂರು ಸಹಾಯಕ ಮಾಹಾ ಪ್ರಬಂಧಬಕ ಹರ್ಷಾ, ಬ್ಯಾಂಕ್ ಆಫ್ ಬರೋಡಾದ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ಅರುಣ್‌ಕುಮಾರ, ಜಿಲ್ಲಾ ಅಗ್ರಣೀಯ ಪ್ರಬಂಧಕ ಬಸವರಾಜ ಗಡದವರ, ನಬಾರ್ಡ್ ಧಾರವಾಡ ಸಹಾಯಕ ಮಹಾ ಪ್ರಬಂಧಕ ಮಯೂರ ಕಾಂಬಳೆ ಉಪಸ್ಥಿತರಿದ್ದರು.
ಬಿ.ಎಸ್. ರಾಠೋಡ, ಡಾ. ವಿ.ಎಸ್. ಕೋರಿಕಂತಿಮಠ, ಶಿವಪುತ್ರಪ್ಪ ಆರ್.ಎಚ್., ನಿಂಗಪ್ಪ ಮಡಿವಾಳ ಹಾಗೂ ರುಡ್‌ಸೆಟ್ ಸಂಸ್ಥೆಯ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net