Triplets ಕೆಎಲ್​ಇ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ

ಹುಬ್ಬಳ್ಳಿಯ ಕೆಎಲ್​ಇ ಆಸ್ಪತ್ರೆಯಲ್ಲಿ ಜನಿಸಿದ ತ್ರಿವಳಿ (Triplets) ಮಕ್ಕಳೊಂದಿಗೆ ಡಾ. ಎಂ.ಜಿ. ಹಿರೇಮಠ, ಡಾ. ಶಾರದಾ ಮಟಗುಡ್, ಡಾ. ಕಾರ್ತಿಕ ಶ್ರೀನಿವಾಸ ಹಾಗೂ ಇತರರಿದ್ದಾರೆ.
ಹುಬ್ಬಳ್ಳಿಯ ಕೆಎಲ್​ಇ ಆಸ್ಪತ್ರೆಯಲ್ಲಿ ಜನಿಸಿದ ತ್ರಿವಳಿ (Triplets) ಮಕ್ಕಳೊಂದಿಗೆ ಡಾ. ಎಂ.ಜಿ. ಹಿರೇಮಠ, ಡಾ. ಶಾರದಾ ಮಟಗುಡ್, ಡಾ. ಕಾರ್ತಿಕ ಶ್ರೀನಿವಾಸ ಹಾಗೂ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ತ್ರಿವಳಿಗಳಲ್ಲಿ ಒಂದು ಹೆಣ್ಣು ಹಾಗೂ ಎರಡು ಗಂಡು ಶಿಶು.
  • ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.
  • ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತ ಹೆರಿಗೆ.
ಕಳೆದ ಡಿಸೆಂಬರ್ 16ರಂದು ಬೆಳಗ್ಗೆ 10.03, 10.04 ಹಾಗೂ 10.05ಕ್ಕೆ ತ್ರಿವಳಿ ಮಕ್ಕಳ ಜನನವಾಗಿದೆ. ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ವಿ. ಉದಯಶ್ರೀ, ಡಾ. ಅಶ್ವಿನಿ ಕೊಳ್ಳೂರ ಅವರ ತಂಡ ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತ ಹೆರಿಗೆ ಮಾಡಿಸಿದೆ.
ತ್ರಿವಳಿಗಳಲ್ಲಿ ಒಂದು ಹೆಣ್ಣು ಹಾಗೂ ಎರಡು ಗಂಡು ಶಿಶುಗಳಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯಲ್ಲಿ ಅರವಳಿಕೆ ತಜ್ಞ ಡಾ. ಕಾರ್ತಿಕ ಶ್ರೀನಿವಾಸ ಮತ್ತು ಡಾ. ಸ್ನೇಹಾ ಶೀಲವಂತ ಹಾಗೂ ಚಿಕ್ಕಮಕ್ಕಳ ತಜ್ಞ ಡಾ. ಭರತ ಕಟ್ಟಿ ಮತ್ತು ಡಾ ರಮ್ಯ ಉಪಸ್ಥಿತರಿದ್ದರು.
ಕೃತಿಕಾ ನೇಕಾರ ಅವರು ತಮ್ಮ ಎರಡನೇ ಹೆರಿಗೆಗಾಗಿ ಕಳೆದ ಮೂರು ತಿಂಗಳಿನಿಂದ ಕೆ.ಎಲ್.ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ತಪಾಸಣೆಗೆ ಭೇಟಿ ನೀಡಿ, ವೈದ್ಯರ ಸಲಹೆ ಪಡೆದುಕೊಂಡಿದ್ದರು.
ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಹೆರಿಗೆ ಇದೇ ಮೊದಲ ಬಾರಿಗೆ ನಡೆದಿದ್ದು, ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ ವೈದ್ಯರಿಗೆ, ತಂತ್ರಜ್ಞರಿಗೆ ಹಾಗೂ ನರ್ಸಿಂಗ್ ಸಿಬ್ಬಂದಿಗೆ ಆಸ್ಪತ್ರೆ ನಿರ್ದೇಶಕ ಡಾ. ಎಂ. ಜಿ. ಹಿರೇಮಠ, ಪ್ರಾಚಾರ್ಯು ಡಾ. ಶಾರದಾ ಮಟಗುಡ್, ಆಡಳಿತಾಧಿಕಾರಿ ಕರ್ನಲ್ ಡಾ. ಅರುಣ ಕುಮಾರ ಎಂ., ಮೆಡಿಕಲ್ ಸುಪರಿಟೆಂಡೆಂಟ್ ಡಾ. ಸಮೀರ ದೇಸಾಯಿ, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಶೋಭಾ ಬೆಂಬಳಗಿ ಹಾಗೂ ವೈದ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net