transport ದಾಖಲೆ ಇಲ್ಲದೆ 15 ಲಕ್ಷ ರೂ. ಸಾಗಣೆ

15 ಲಕ್ಷ ರೂ. ಸಾಗಣೆ ಪ್ರಕರಣ transport
15 ಲಕ್ಷ ರೂ. ಸಾಗಣೆ ಪ್ರಕರಣ transport
Published on
ಹುಬ್ಬಳ್ಳಿ: ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ವೇಳೆ ವ್ಯಕ್ತಿಯೊಬ್ಬರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ (transport) 15 ಲಕ್ಷ ರೂ. ಹಣವನ್ನು ರೈಲ್ವೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಆಂಧ್ರ ಮೂಲದ ರೈಲ್ವೆ ಗುತ್ತಿಗೆದಾರ ಚಿಗುರುಪತಿ ಬಸವ ಕುಟುಂಬರಾವ್ ಸುಬ್ರಹ್ಮಣ್ಯಂ ಕಪ್ಪು ಬಣ್ಣದ ಬ್ಯಾಗ್ ಮತ್ತು ಒಂದು ಟ್ರಾೃಲಿ ಬ್ಯಾಗ್ ತರುತ್ತಿದ್ದರು. ಈ ವೇಳೆ ಪರಿಶೀಲಿಸಿದಾಗ ಬ್ಯಾಗಿನಲ್ಲಿ 500 ರೂ.ನೋಟಿನ ಬಂಡಲ್‌ಗಳು ಪತ್ತೆಯಾಗಿವೆ.
ಪಂಚರ ಸಮಕ್ಷಮದಲ್ಲಿ ಎಣಿಸಿದಾಗ 15 ಲಕ್ಷ ರೂ. ಇರುವುದು ಗೊತ್ತಾಗಿದೆ. ಆರೋಪಿ ಬಳಿ ಇದಕ್ಕೆ ಸೂಕ್ತ ದಾಖಲೆಗಳಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net