ದಂಡ ಭರಣಕ್ಕೆ ಸಾರಿಗೆ ಇಲಾಖೆ ಶೇ. 50ರಷ್ಟು ರಿಯಾಯಿತಿ RTO fine discount

ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ
ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ
Published on
ಧಾರವಾಡ: ರಾಜ್ಯ ಸರ್ಕಾರ ವಿವಿಧ ರೀತಿಯ ಸಂಚಾರ ವಾಹನಗಳ ನಿಯಮ ಉಲ್ಲಂನೆ ಪ್ರಕರಣಗಳಲ್ಲಿ ವಿಧಿಸಿದ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿದೆ. ವಾಹನಗಳ ಮಾಲೀಕರು ಇದರ ಸದುಪಯೋಗ ಪಡೆಯಬೇಕು ಎಂದು ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ ಹೇಳಿದರು.
ನವನಗರದ ಪ್ರಾದೇಶಿಕ ಸಾರಿಗೆ ಅ-ಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾರಿಗೆ ಇಲಾಖೆಯಲ್ಲಿ 1991ರಿಂದ 2020ರವರೆಗೆ ದಾಖಲಾದ ಪ್ರಕರಣಗಳಲ್ಲಿ ಶೇ. 50ರಷ್ಟು ವಿನಾಯಿತಿ ನೀಡಿದೆ. ನ. 21ರಿಂದ ಆರಂಭವಾಗಿದ್ದು, ಡಿ. 12ರವರೆಗೆ ಅವಕಾಶವಿದೆ. ಹುಬ್ಬಳ್ಳಿ ಧಾರವಾಡದಲ್ಲಿ 3,051 ಪ್ರಕರಣ, ಬೆಳಗಾವಿ ವಿಭಾಗದಲ್ಲಿ 11,557 ಪ್ರಕರಣ, ಗುಲ್ಬರ್ಗ ವಿಭಾಗದಲ್ಲಿ 7,473 ಪ್ರಕರಣಗಳು ಇವೆ. ಹುಬ್ಬಳ್ಳಿ ಧಾರವಾಡದಲ್ಲಿ ಪಾಂಡಿಚೇರಿಯ ನೋಂದಣಿ ಹೊಂದಿದ್ದ 15 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅವುಗಳಿಂದ 1.50 ಕೋಟಿ ರೂ. ದಂಡದ ಹಣ ಸಂಗ್ರಹವಾಗಿದೆ. ಶಾಲಾ ವಾಹನಗಳಲ್ಲಿ ನಿಯಮಕ್ಕಿಂತ ಹೆಚ್ಚು ವಿದ್ಯಾಥಿರ್ಗಳನ್ನು ಕೂಡಿಸಿಕೊಂಡ ಕುರಿತ ಅಕ್ಟೋಬರ್​ ಅಂತ್ಯದವರೆಗೆ 3,902 ಪ್ರಕರಣಗಳು ದಾಖಲಾಗಿವೆ ಎಂದರು.
ಇದೇವೇಳೆ ಟ್ರೇಲರ್​ ಇರುವ ವಾಹನಗಳಿಗೆ ಅಳವಡಿಸಲು ರಿ್ಲೆಕ್ಷನ್​ ಬಟ್ಟೆ ಬ್ಯಾನರ್​ ಬಿಡುಗಡೆ ಮಾಡಿದರು. ಕಬ್ಬು ಸಾಗಿಸುವ ವಾಹನಗಳು ಕಡ್ಡಾಯವಾಗಿ ಅಳವಡಿಸುವದರಿಂದ ಅಪಘಾತ ನಿಯಂತ್ರಣ ಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಮೊಟಾರು ವಾಹನ ನಿರೀಕ್ಷಕ ಮಹೇಶ ಮಠಪತಿ, ದಿನಮನಿ ಟಿ.ವಿ. ಇತರರಿದ್ದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net