ಕೃಷಿ ವಿವಿಯಲ್ಲಿ ವರ್ಗಾವಣೆ ಅವ್ಯವಹಾರ ಆರೋಪ

Ravi Maliger
Ravi Maliger
Published on
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್​. ಪಾಟೀಲ ಅವರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಹಿಡಿದು ಉಪನ್ಯಾಸಕರು, ಅತಿಥಿ ಉಪನ್ಯಾಸಕರ ವರ್ಗಾವಣೆಯಲ್ಲಿ ಭಾರೀ ಅವ್ಯವಹಾರ ನಡೆಸಿದ್ದಾರೆ ಎಂದು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ರವಿ ಮಾಳಗೇರ, ಬಸವರಾಜ ಕುಂದಗೋಳಮಠ, ವೀರನಗೌಡ ಪೊಲೀಸ್​ಗೌಡರ, ಪಾರ್ವತಿ ಕುರ್ಲೆ ಮಂಗಳವಾಋ ಜಂಟಿ ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದರು.
ವರ್ಗಾವಣೆಗೆ ನಿಯಮಾವಳಿ ಇದೆ. ಅದನ್ನು ಗಾಳಿಗೆ ತೂರಿರುವ ಕುಲಪತಿಗಳು ವರ್ಷವಿಡೀ ವರ್ಗಾವಣೆ ಪ್ರಕ್ರಿಯೆ ನಡೆಸಿದ್ದಾರೆ. ಒಮ್ಮೆ ವರ್ಗಾವಣೆಯಾದವರನ್ನು 3 ವರ್ಷಗಳವರೆಗೆ ವರ್ಗಾವಣೆ ಮಾಡುವಂತಿಲ್ಲ. ಆದರೆ, ಕುಲಪತಿಗಳು ಹಣದ ವ್ಯವಹಾರ ನಡೆಸಿ ವರ್ಗಾವಣೆ ಮಾಡಿರುವ ಸಂಶಯವಿದೆ. ವರ್ಗಾವಣೆ ಪಟ್ಟಿ ಕೊಡಿ ಎಂದರೆ ಕುಲಪತಿಗಳು ಕೊಡುತ್ತಿಲ್ಲ. ಈ ಸಂಬಂಧ ನಾವು ರಾಜ್ಯಪಾಲರು, ಸಿಎಂ, ಕೃಷಿ ಸಚಿವರು, ಲೋಕಾಯುಕ್ತರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದರು.
ನಿರಂತರ ವರ್ಗಾವಣೆಯಿಂದ 28 ಸಂಶೋಧನಾ ಕೇಂದ್ರಗಳಲ್ಲಿ 20 ಕೇಂದ್ರಗಳು 3 ವರ್ಷಗಳಿಂದ ಆಥಿರ್ಕ ನಷ್ಟದಲ್ಲಿವೆ. 2023& -24ರ ಆಥಿರ್ಕ ವರ್ಷದಲ್ಲಿ 1.05 ಕೋಟಿ ರೂಪಾಯಿ ನಷ್ಟವಾಗಿದೆ. ವರ್ಗಾವಣೆ, ಮರುವರ್ಗಾವಣೆಯ ನಂತರ ತಪ್ಪಾದ ಖಾತೆ ಶೀಷಿರ್ಕೆಗಳ ಅಡಿ ಸಂಬಳ ಜಮೆ ಮಾಡಲಾಗುತ್ತಿದೆ. ಇದರಿಂದ ಸಿಬ್ಬಂದಿ ಹಾಗೂ ಖಜಾನೆಗೆ ಆಥಿರ್ಕ ನಷ್ಟವಾಗುತ್ತಿದೆ ಎಂದು ವ್ಯವಸ್ಥಾಪನಾ ಮಂಡಳಿ ಸದಸ್ಯರು ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net