ಹುಬ್ಬಳ್ಳಿಯ (traffic) ವಿದ್ಯಾನಗರದ ಓಲ್ಡ್ ಇನ್‌ಕಮ್ ಟ್ಯಾಕ್ಸ್ ರಸ್ತೆಯಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಶುಕ್ರವಾರ ‘ಸಂಚಾರ ಕನ್ನಡಿ’ ಅಳವಡಿಸಿ ಉದ್ಘಾಟಿಸಿದರು.
ಹುಬ್ಬಳ್ಳಿ: ಸಂಚಾರ (traffic) ಜಾಗೃತಿ ತಿಂಗಳು ಹಾಗೂ ರಸ್ತೆ ಸುರಕ್ಷತೆ ದೃಷ್ಟಿಯಿಂದ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ಇಲ್ಲಿಯ ವಿದ್ಯಾನಗರದ ಓಲ್ಡ್ ಇನ್‌ಕಮ್ ಟ್ಯಾಕ್ಸ್ ರಸ್ತೆಯಲ್ಲಿ ‘ಸಂಚಾರ ಕನ್ನಡಿ’ಯನ್ನು ಶುಕ್ರವಾರ ಅಳವಡಿಸಲಾಯಿತು.
ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಉದ್ಘಾಟಿಸಿ ಮಾತನಾಡಿ, ರೋಟರಿ ಕ್ಲಬ್ ಆಫ್ ಸೆಂಟ್ರಲ್ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ವಾಹನ ಸಂಚಾರ ಹಿತ ದೃಷ್ಟಿಯಿಂದ ಸಂಚಾರ ಕನ್ನಡಿಯನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿರುವುದು ಶ್ಲಾಘನೀಯ ಎಂದರು.
ಕ್ಲಬ್ ಅಧ್ಯಕ್ಷೆ ಅಂಜನಾ ಬಸನಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಕ್ಲಬ್ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ. ಸಂಚಾರ ಕನ್ನಡಿ ಅಳವಡಿಕೆಯಿಂದ ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಅವರ ವಾರ್ಡ್ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ನಿರ್ಗಮಿತ ಅಧ್ಯಕ್ಷೆ ಸಂಜನಾ ಮಹೇಶ್ವರಿ, ಡಾ. ವರ್ಷಾ ಬಂಗಾರಶೆಟ್ಟರ್, ಕೀರ್ತಿ ತಂಬದ, ಸುಚೇತಾ ತಂಬದ ಇತರರು ಇದ್ದರು.