tora tori group ಸಾಧಕರಿಗೆ ’ರತ್ನ’ ಪ್ರಶಸ್ತಿ ಪ್ರದಾನ

tora tori group ಟೋರಾ ಟೋರಿ ಗ್ರೂಪ್ ವತಿಯಿಂದ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಅಭ್ಯುದಯ 2026’ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
tora tori group ಟೋರಾ ಟೋರಿ ಗ್ರೂಪ್ ವತಿಯಿಂದ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಅಭ್ಯುದಯ 2026’ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
Published on
ಹುಬ್ಬಳ್ಳಿ: ಟೋರಾ ಟೋರಿ ಗ್ರೂಪ್ tora tori group ವತಿಯಿಂದ ನಗರದ ಹೋಟೆಲ್ ನವೀನ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಅಭ್ಯುದಯ 2026’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ವಿದೂಷಿ ಹೇಮಾ ವಾಘಮೋಡೆ (ವಿಷಿಷ್ಟ ಕಲಾ ರತ್ನ), ಡಾ. ಶಶಿಧರ ನರೇಂದ್ರ (ಕಲಾ ಸೇವಾ ರತ್ನ), ಶಿವಲಿಂಗಯ್ಯ ಶಿವಯೋಗಿಮಠ ‘ಉದ್ಯೋಗ ಸೇವಾ ರತ್ನ’, ಮನೋಹರ ಪತ್ತಾರ (ಕುಂಚ ಕಲಾ ರತ್ನ), ಐಶ್ವರ್ಯ ಬಾಳೆಹೊಸೂರ (ಕ್ರೀಡಾ ರತ್ನ) ಅವರಿಗೆ ಪ್ರಶಸ್ತಿ ನೀಡಲಾಯಿತು.
ವಿವಿಧ ರಾಜ್ಯಗಳ ಸಾಂಸ್ಕೃತಿಕ ನೃತ್ಯಗಳು ಹಾಗೂ ಭರತನಾಟ್ಯ ಪ್ರದರ್ಶನಗಳು ನೆರೆದಿದ್ದ ಪ್ರೇಕ್ಷಕರ ಕಣ್ಮನ ಸೆಳೆದವು.
ಶಾಸಕ ಮಹೇಶ ಟೆಂಗಿನಕಾಯಿ, ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ಖ್ಯಾತ ನರರೋಗ ತಜ್ಞ ಡಾ. ಸುರೇಶ ದುಗಾಣಿ, ಶಿವಲಿಂಗಯ್ಯ ಶಿವಯೋಗಿಮಠ, ಶಿವಾನಂದ ಗುಂಜಳ, ಸಂಸ್ಥೆಯ ಸಂಸ್ಥಾಪಕ ಶಿವಶಂಕರ, ಉತ್ತರ ಕರ್ನಾಟಕ ವಿಭಾಗದ ಕ್ಲಸ್ಟರ್ ಹೆಡ್ ಆನಂದ ಸವಣೂರ ಇತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net