tobacco day ಜಗಿದರೆ ತಂಬಾಕು ಬದುಕು ಕೊಳಕು

tobacco day ಹುಬ್ಬಳ್ಳಿಯ ಜೆಎಸ್​ಎಸ್​ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳವಾರ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಡಾ. ಕೇಶವ ಎಂ.ಎಸ್​. ಮಾತನಾಡಿದರು. ಡಾ. ರಂಜಿತ, ಡಾ. ರೂಪಾ ಇಂಗಳಹಳ್ಳಿ, ಸುರೇಶ ಲಿಂಬಿಕಾಯಿ ಇತರರು ಇದ್ದರು.
tobacco day ಹುಬ್ಬಳ್ಳಿಯ ಜೆಎಸ್​ಎಸ್​ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳವಾರ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಡಾ. ಕೇಶವ ಎಂ.ಎಸ್​. ಮಾತನಾಡಿದರು. ಡಾ. ರಂಜಿತ, ಡಾ. ರೂಪಾ ಇಂಗಳಹಳ್ಳಿ, ಸುರೇಶ ಲಿಂಬಿಕಾಯಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಕ್ರಿ ಕಾನೂನು ಕಾಲೇಜಿನಲ್ಲಿ ಕಾರ್ಯಾಗಾರ
  • ತಂಬಾಕಿನಿಂದ ದೂರವಿರಲು ವೈದ್ಯರ ಸಲಹೆ
ಹುಬ್ಬಳ್ಳಿ: tobacco day ಇಲ್ಲಿಯ ಹೆಗ್ಗೇರಿ ಜೆಎಸ್​ಎಸ್​ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಎನ್​ಎಸ್​ಎಸ್​ ಮತ್ತು ಯುವ ರೆಡ್​ ಕ್ರಾಸ್​ ಘಟಕದ ವತಿಯಿಂದ ಮಂಗಳವಾರ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ವಿಶೇಷ ಆರೋಗ್ಯ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಆರ್ಯುವೇದ ಮಹಾವಿದ್ಯಾಲಯ ವೈದ್ಯ ಡಾ. ಕೇಶವ ಎಂ.ಎಸ್​. ಇವರು, ತಂಬಾಕು ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ವಿವರಿಸಿದರು.ತಂಬಾಕು ಸೇವನೆಯನ್ನು ತಡೆಯಲು ಹಾಗೂ ನಿಗ್ರಹಿಸಲು ಡಬ್ಲೂಎಚ್​ಒ 1988 ಮೇ 31ರಿಂದ ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸುತ್ತ ಬಂದಿದೆ.
ತಂಬಾಕು 70 ಅಂಶಗಳನ್ನು ಹೊಂದಿದ್ದು ಇದರಲ್ಲಿ ನಿಕೋಟಿನ್​ ನಂತಹ ಅಂಶಗಳು ಕ್ಯಾನ್ಸರಕಾರಕಗಳಾಗಿವೆ. ಮೊದಲಿಗೆ ಬಾಯಿ ಹುಣ್ಣಿನಿಂದ ಆರಂಭವಾಗುವ ರೋಗವು ಮುಂದೆ ಕ್ಯಾನ್ಸರ ರೋಗಕ್ಕೆ ಗುರಿಯಾಗಿ, ದೇಹದ ಭಾಗಗಳಿಗೆ ಹರಡಿ ಜೀವವನ್ನು ನರಕವಾಗಿಸುತ್ತದೆ ಎಂದು ಹೇಳಿದರು.
ಡಾ. ರಂಜಿತ ಮಾತನಾಡಿ, ಪ್ರಥಮ ಚಿಕಿತ್ಸೆ ಎಂದರೆ ಮೊದಲು ನೀಡುವ ಸಹಾಯ, ಇದನ್ನು ಯಾರಾದರೂ ನೀಡಬಹುದು. ಜನಸಾಮಾನ್ಯರಲ್ಲಿ ಪ್ರಥಮ ಚಿಕಿತ್ಸೆಯ ಅರಿವು ಮೂಡಿಸುವದು ಅವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ರೂಪಾ ಇಂಗಳಹಳ್ಳಿ ಮಾತನಾಡಿ, ಜೀವ ಉಳಿಸುವ ಕೌಶಲಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮ ಸಂಯೋಜಕ, ಎನ್​ಎಸ್​ಎಸ್​ ಅಧಿಕಾರಿ ಸುರೇಶ ಲಿಂಬಿಕಾಯಿ ಮತ್ತು ಯುವ ರೆಡ್​ಕ್ರಾಸ್​ ಘಟಕದ ಸಂಯೋಜಕಿ ಪೂರ್ಣಿಮಾ ಕುರಡಿಕೇರಿ, ಡಾ. ಬಾಬುಲಾಲ್​ ದರಗದ, ಡಾ. ದೀಪಾ ಪಾಟೀಲ, ಸತೀಶ್​ ಸಿ.ವಿ., ಸುರೇಶ ಲಮಾಣಿ, ಪರಸಪ್ಪ ಮಾಂಗ, ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net