ತಿರಂಗಾ ಸಪ್ತಾಹಕ್ಕೆ ಚಾಲನೆ tiranga

tiranga ಹುಬ್ಬಳ್ಳಿಯ ಚಿನ್ಮಯ ಸಮೂಹ ಸಂಸ್ಥೆಯಲ್ಲಿ ತಿರಂಗಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
tiranga ಹುಬ್ಬಳ್ಳಿಯ ಚಿನ್ಮಯ ಸಮೂಹ ಸಂಸ್ಥೆಯಲ್ಲಿ ತಿರಂಗಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ದೇಶಾಭಿಮಾನದ ಕಿಚ್ಚು ಹೆಚ್ಚಿಸುವುದು
  • ಸ್ವಾತಂತ್ರ್ಯ ವೀರರನ್ನು ಸ್ಮರಿಸುವುದು
  • ಖಾದಿ ಉತ್ಪನ್ನದ ಧ್ವಜಗಳನ್ನು ಖರೀದಿಸುವುದು
ಚಾಲನೆ ನೀಡಿದ ಖಾದಿ ಗ್ರಾಮೋದ್ಯೋಗ ಸಂಘದ ರೀತು ಕಬಾಡೆ, ಬಾವುಟದ ವಿಶ್ಲೇಷಣೆ ಹಾಗೂ ಮಹತ್ವದ ಕುರಿತು ಮಾತನಾಡಿದರು.

ಒಂದು ವಾರ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಎದೆಯ ಮೇಲೆ ಚಿಕ್ಕ ತ್ರಿವರ್ಣ ಧ್ವಜ ಧರಿಸುವುದು, ದೇಶಭಕ್ತಿ ಮೂಡಿಸುವ ವಿವಿಧ ಕಾರ್ಯಕ್ರಮ ಆಯೋಜಿಸುವುದು, ಜನಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ ಎಂದು ಪ್ರಾಚಾರ್ಯ ಪಿ. ಶರ್ವಿುಲಿ ನಾಯ್ಡು ತಿಳಿಸಿದರು.

ಹಮ್ ಭಾರತಿ ಫೌಂಡೇಷನ್ ಅಧ್ಯಕ್ಷ ಅನ್ವರ ಮುಲ್ಲಾ ಮಾತನಾಡಿ, ಹರ್ ಘರ್ ತಿರಂಗಾ ರೂಪದಲ್ಲಿಯೇ ಈ ಅಭಿಯಾನವನ್ನು ಇಡೀ ಭಾರತದಲ್ಲಿ ಎಲ್ಲ ಶಾಲಾ-ಕಾಲೇಜುಗಳಲ್ಲಿ ಆಚರಿಸಬೇಕು ಎಂದರು.

ದೇಶಾಭಿಮಾನದ ಕಿಚ್ಚು ಹೆಚ್ಚಿಸುವುದು, ಸ್ವಾತಂತ್ರ್ಯ ವೀರರನ್ನು ಸ್ಮರಿಸುವುದು, ಖಾದಿ ಉತ್ಪನ್ನದ ಧ್ವಜಗಳನ್ನು ಖರೀದಿಸುವುದು, ಖಾದಿ ಗ್ರಾಮೋದ್ಯೋಗಗಳಿಗೆ ಉತ್ತೇಜನ ನೀಡುವ ಕಾರ್ಯ ಆಗಬೇಕು ಎಂದರು.

ಆಡಳಿತಾಧಿಕಾರಿ ವಿಶ್ವನಾಥ ರಾನಡೆ ಅಧ್ಯಕ್ಷತೆ ವಹಿಸಿದ್ದರು. ಚಿನ್ಮಯ ಕಾಲೇಜು ಮತ್ತು ಚಿನ್ಮಯ ವಿದ್ಯಾಲಯದ ಸುಮಾರು 3 ಸಾವಿರ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net