14ನೇ ದಲಾಯಿ ಲಾಮಾ ಅವರು 1995ರ ಮೇ 14ರಂದು ಸಾಂಪ್ರದಾಯಿಕವಾಗಿ ಗೆಧುನ್ ಚೋಕಿ ನ್ಯಾಮಾ ಅವರನ್ನು 11ನೇ ಪಂಚೇನ್ ಲಾಮಾ ಎಂದು ಘೋಷಣೆ ಮಾಡಿದ್ದರು. ಅದಾದ ಮೂರು ದಿನಗಳ ನಂತರ ಅವರು ಕಣ್ಮರೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ, ಇದಕ್ಕಾಗಿ ವಿಶ್ವದ ರಾಷ್ಟ್ರಗಳು ತಮಗೆ ಸಹಕಾರ ನೀಡಬೇಕು ಎಂಬುದು ಟಿಬೇಟಿಯನ್ ವುಮೆನ್ಸ್ ಅಸೋಸಿಯೇಶನ್ ಮನವಿ.