ಈ ಕುಖ್ಯಾತ ಕಳ್ಳರ ತಂಡಕ್ಕೆ ಜನಸಾಮಾನ್ಯರ ಮನೆಯಾಗಲಿ, ನ್ಯಾಯಾಧೀಶರ ಮನೆಯೇ ಅಗಲಿ... ಹೊಂಚು ಹಾಕಿದರೆಂದರೆ ಭರ್ಜರಿ ಕಳ್ಳತನ ಖಾತ್ರಿ. ಆ. 28ರಂದು ರಾತ್ರಿ ವೇಳೆ ಗುರುಕೃಪಾನಗರದ ಕೀಲಿ ಹಾಕಿದ್ದ ನ್ಯಾಯಾಧೀಶರೊಬ್ಬರ ಮನೆಗೆ ಈ ಕಳ್ಳರ ಗ್ಯಾಂಗ್ ನುಗ್ಗಿತ್ತು. ಮುಖಕ್ಕೆ ಮುಸುಕು ಹಾಕಿಕೊಂಡು ಮನೆಗೆ ನುಗ್ಗಿ ಕಳವು ಮಾಡಿದೆ. ಮನೆಯ ಆವರಣದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಲನವಲನ ದಾಖಲಾಗಿದೆ. ಅಲ್ಲದೆ, ಈ ಪ್ರದೇಶದ 3& 4 ಮನೆಗಳ ಎದುರು ಹಾಕಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳತ ಓಡಾಟ ಕಂಡುಬಂದಿದೆ. ಅಂದಿನಿಂದ ಪೊಲೀಸರು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದರೂ ಕಳ್ಳರ ಪತ್ತೆ ಸಾಧ್ಯವಾಗಿಲ್ಲ.