(thief arrested) 16 ವರ್ಷ ಗಿರಗಿಟ್ಲೆ ಆಡಿಸಿದ್ದವ ಅಂದರ್

ಲೋಕೇಶ ಭೀಮಕ್ಕನವರ (thief arrested)
ಲೋಕೇಶ ಭೀಮಕ್ಕನವರ (thief arrested)
Published on
ಹುಬ್ಬಳ್ಳಿ: ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದವನನ್ನು(thief arrested) ಬಂಧಿಸುವಲ್ಲಿ ಇಲ್ಲಿಯ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಕಮಲಾಪೂರದ ಲೋಕೇಶ ಭೀಮಕ್ಕನವರ ಬಂಧಿತ. ಶ್ರೀರಾಮ ಫೈನಾನ್ಸ್‌ನಲ್ಲಿ ಸೀಜ್ ಮಾಡಿ ನಿಲ್ಲಿಸಿದ್ದ ಲಾರಿಯ ನಂಬರ್ ಪ್ಲೇಟ್ ತೆಗೆದುಕೊಂಡು ತನ್ನ ಲಾರಿಗೆ ಹಾಕಿ, ಟ್ರಾನ್ಸ್‌ಪೋರ್ಟ್ ಕಂಪನಿಯೊಂದರ ವ್ಯವಸ್ಥಾಪಕರಿಗೆ ನಂಬಿಸಿದ್ದಾನೆ. ನಕಲಿ ದಾಖಲಾತಿಗಳನ್ನು ಹಾಜರುಪಡಿಸಿ ಹಿಂದೂಸ್ತಾನ ಲೀವರ್ ಕಂಪನಿಯಿಂದ ಹೊಸಪೇಟೆ ಮತ್ತು ಕಂಪ್ಲಿಗೆ ಹೋಗಬೇಕಾದ 14,87,289 ರೂ. ಮೌಲ್ಯದ ಸೋಪು, ಪೌಟರ್, ಶ್ಯಾಂಪೂ ಇತರ ವಸ್ತುಗಳನ್ನು ತನ್ನ ಲಾರಿಯಲ್ಲಿ ತುಂಬಿಕೊಂಡು ಬೇರೆಡೆ ಮಾರಾಟ ಮಾಡಲು ಯತ್ನಿಸಿದ್ದಾನೆ. ಈ ಕುರಿತು 2010ರ ಜೂನ್ 7ರಂದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಲೋಕೇಶ ನ್ಯಾಯಾಲಯದಿಂದ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ. ನಂತರ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಓಪನ್ ವಾರಂಟ್ ಹೊರಡಿಸಿತ್ತು. ಇದರ ಬೆನ್ನು ಬಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ತಂಡ, ಬೇರೆಯವರ ಮೊಬೈಲ್ ಫೋನ್ ಬಳಸುತ್ತ ಬೇರೆ ಬೇರೆ ರಾಜ್ಯಗಳಲ್ಲಿ ಓಡಾಡುತ್ತಿದ್ದ ಲೋಕೇಶನನ್ನು ಗೋವಾದಲ್ಲಿ ಪತ್ತೆ ಹೆಚ್ಚಿ ಬಂಧಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net