ಬಸವರಾಜ ಪಿ. ಎಂಬುವವರು ಕುಟುಂಬ ಸಮೇತ ಮುಂಡಗೋಡಕ್ಕೆ ಹೋದಾಗ ಕಳ್ಳರು ಮನೆಯೊಳಗಡೆ ಪ್ರವೇಶ ಮಾಡಿದ್ದಾರೆ. ಲಾಕರ್ ಮುರಿದು ಅದರಲ್ಲಿದ್ದ 4.17 ಲಕ್ಷ ರೂ. ಮೌಲ್ಯದ 73.5 ಗ್ರಾಂ ಚಿನ್ನ ಹಾಗೂ 18 ಸಾವಿರ ರೂ. ಮೌಲ್ಯದ 600 ಗ್ರಾಂ ಬೆಳ್ಳಿ ಆಭರಣ ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.