(theft) ಮನೆ ಕೀಲಿ ಹಾಕಿದ್ರೂ ಮುರೀತಾರೆ ಕಳ್ರು...

(theft) ಹಳೇ ಮಂಟೂರ ರೋಡ್‌ನ ವಿದ್ಯಾದರ್ಶನಿ ಶಾಲೆ ಹತ್ತಿರದ ಮನೆಯೊಂದರಲ್ಲಿ ಕಳವಾಗಿದೆ.
(theft) ಹಳೇ ಮಂಟೂರ ರೋಡ್‌ನ ವಿದ್ಯಾದರ್ಶನಿ ಶಾಲೆ ಹತ್ತಿರದ ಮನೆಯೊಂದರಲ್ಲಿ ಕಳವಾಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಹೊರಗಡೆ ಹೋದ್ರೆ ಮನೆ ಬಗ್ಗೆ ಇರಲಿ ಎಚ್ಚರ!
ಹುಬ್ಬಳ್ಳಿ: ಬಾಗಿಲು ಕೀಲಿ ಮುರಿದು 2.51 ಲಕ್ಷ ರೂ. ಮೌಲ್ಯದ ಆಭರಣ, 45 ಸಾವಿರ ರೂ. ನಗದು ಕಳವಾದ (theft) ಘಟನೆ ಇಲ್ಲಿಯ ಹಳೇ ಮಂಟೂರ ರೋಡ್‌ನ ವಿದ್ಯಾದರ್ಶನಿ ಶಾಲೆ ಹತ್ತಿರದ ಮನೆಯೊಂದರಲ್ಲಿ ನಡೆದಿದೆ.
ಮುತ್ತುರಾಜ ಅಂಗಡಿ ಎಂಬುವವರ ಮನೆಯಲ್ಲಿ ಕಳವಾಗಿದೆ. ತಿಜೋರಿಯ ಲಾಕರ್‌ನಲ್ಲಿಟ್ಟಿದ್ದ 10 ಗ್ರಾಂ ತೂಕದ ಬಂಗಾರದ ಮಾಂಗಲ್ಯ, 280 ಗ್ರಾಂ ತೂಕದ ಬೆಳ್ಳಿ ಆಭರಣ ಮತ್ತು 45 ಸಾವಿರ ನಗದು ಸೇರಿ ಒಟ್ಟು 2.51 ಲಕ್ಷ ರೂ ಕಿಮ್ಮತ್ತಿನ ವಸ್ತುಗಳನ್ನು ಕಳವಾಗಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net