ಹುಬ್ಬಳ್ಳಿ: ಮನೆಯ ಹಿಂಬಾಗಿಲ ಲಾಕರ್ ಮುರಿದ ಒಳಪ್ರವೇಶಿಸಿದ ಕಳ್ಳರು, ಎರಡೂ ಬೆಡ್‌ರೂಮ್‌ನಲ್ಲಿದ್ದ ನಗ-ನಗದು ಕಳವು theft ಮಾಡಿಗ ಘಟನೆ ಇಲ್ಲಿಯ ಸಿದ್ದರಾಮೇಶ್ವರ ನಗರದ ಮಹಾನಂದಿ ಲೇಔಟ್‌ನಲ್ಲಿ ನಡೆದಿದೆ.
ರಾಜೇಂದ್ರ ಎಂಬುವವರು ಕುಟುಂಬ ಸಮೇತ ಪುಣೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು, ಮನೆಯಲ್ಲಿದ್ದ 15 ಗ್ರಾಂ ಚಿನ್ನ, ಮೊಬೈಲ್ ಫೋನ್, 50 ಸಾವಿರ ರೂ. ನಗದು ಸೇರಿ ಒಟ್ಟು 1.35 ಲಕ್ಷ ರೂ. ಕಳವಾಗಿದೆ ಎಂದು ರಾಜೇಂದ್ರ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.