Red Cross ರೆಡ್‌ಕ್ರಾಸ್ ಸ್ಥಾಪನೆಗೆ ಯುದ್ಧವೇ ಕಾರಣ

ಧಾರವಾಡ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ರೆಡ್‌ಕ್ರಾಸ್ ದಿನಾಚರಣೆಯಲ್ಲಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಧಾರವಾಡ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ರೆಡ್‌ಕ್ರಾಸ್ ದಿನಾಚರಣೆಯಲ್ಲಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Published on
ಧಾರವಾಡ: ಜಗತ್ತಿನಲ್ಲಿ ಪ್ರಸ್ತುತ ಯುದ್ಧಗಳು ನಡೆಯುತ್ತಿವೆ. ಹಿಂದೆಯೂ ಕೂಡಾ ನಡೆದಿವೆ. ರೆಡ್‌ಕ್ರಾಸ್ Red Cross ಸಂಸ್ಥೆಯು ಸ್ಥಾಪನೆಯಾಗಲು ಯುದ್ಧದ ಸಂದರ್ಭವೇ ಕಾರಣವಾಗಿದೆ ಎಂದು ಕವಿವಿ ಯುತ್ ರೆಡ್‌ಕ್ರಾಸ್ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಮಾರ್ತಾಂಡಪ್ಪ ಕತ್ತಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ನಗರದ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ. ಹಾಗೂ ಯುತ್ ರೆಡ್‌ಕ್ರಾಸ್ ಘಟಕದಡಿ ಆಯೋಜಿಸಿದ್ದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಹಾಗೂ ಸಂಸ್ಥೆ ಸ್ಥಾಪಕ ಹೆನ್ರಿ ಡ್ಯುನಾಂಟ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಯೂತ್ ರೆಡ್ ಕ್ರಾಸ್ ಸಂಸ್ಥೆಯು ಆರೋಗ್ಯ, ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ, ಸೇವಾ ಮನೋಭಾವನೆ, ಸಾಮಾಜಿಕ ಜವಾಬ್ದಾರಿ, ರಕ್ತದಾನ, ಪ್ರಥಮ ಚಿಕಿತ್ಸೆ ಮುಂತಾದವುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ನಮಗೆ ಆರೋಗ್ಯದ ಬಗ್ಗೆ ಮತ್ತು ತುರ್ತು ಚಿಕಿತ್ಸೆಯ ಬಗ್ಗೆ ಜ್ಞಾನವಿರಬೇಕು ಎಂದರು.
ಸಮಾಜದ ದುರ್ಬಲರಿಗೆ ಸಹಾಯ ಮಾಡಬೇಕು. ರಾಷ್ಟ್ರೀಯ ಏಕತೆಯ ಬಗ್ಗೆ ಗೌರವ ಇರಬೇಕು. ವಿದ್ಯಾರ್ಥಿಗಳು ತಂದೆ-ತಾಯಿ, ಗುರು- ಹಿರಿಯರಿಗೆ ಗೌರವಿಸಬೇಕು. ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ. ನೀಲಕ್ಕಾ ಪಾಟೀಲ ಮಾತನಾಡಿ, ಕಳಿಂಗ ಯುದ್ಧದ ನಂತರ ಸಾಮ್ರಾಟ್ ಅಶೋಕನ ಮನಸ್ಸು ಬದಲಾಯಿತು. ಹಾಗೆಯೇ ಹೆನ್ರಿ ಡ್ಯುನಾಂಟ್‌ರು ಯುದ್ಧವನ್ನು ನೋಡಿ ಬದಲಾಗಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಜಗತ್ತಿನಲ್ಲಿ ಮೇಲಿಂದ ಮೇಲೆ ಯುದ್ಧಗಳು ನಡೆಯುತ್ತಿವೆ. ಯುದ್ಧಗಳು ನಮಗೆ ಕೊನೆಯ ಅಸವಾಗಬೇಕು ಎಂದು ನುಡಿದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ‘ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು’ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಯಿತು.
ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಸುಜಾತಾ ಸುರ್ವೆ ಪ್ರಥಮ, ಎಂಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಸೀಮಾ ಎಮ್ಮಿ ದ್ವಿತೀಯ, ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸಂಜನಾ ಜಂಭಗಿ, ಎಂಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಸುಷ್ಮಾ ಬೆಟಗೇರಿ ತೃತೀಯ ಸ್ಥಾನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net