ಧಾರವಾಡ: ಊರಲ್ಲಿದ್ದ 5-6 ಕೊಳವೆ ಬಾವಿಗಳು ಬತ್ತಿದ್ದು ನೀರಿಗೆ ಹಾಹಾಕಾರ ಉಂಟಾಗಿದೆ. ಗ್ರಾಪಂ ಆಡಳಿತಾಧಿಕಾರಿ, ಪಿಡಿಒಗೆ ಹೇಳಿದರೂ ಬವಣೆ ನೀಗಿರಲಿಲ್ಲ. ಹೀಗಾಗಿ ಶಾಲಾ ಮಕ್ಕಳೇ ಶಾಲಾ ಸುಧಾರಣೆ ಸಮಿತಿ ಸದಸ್ಯರೊಂದಿಗೆ ಸೇರಿ ಪಟ್ಟಿ ಹಾಕಿ (ಹಣ ಕೂಡಿಸಿ) ಬೋರ್‌ವೆಲ್ ಕೊರೆಸಿ ಮಾದರಿಯಾಗಿದ್ದಾರೆ. ಇದರಿಂದ, ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಚಾಟಿ ಏಟು ಕೊಟ್ಟಂತೆಯೂ ಆಗಿದೆ.