ಅಳ್ನಾವರ: ತಾಲೂಕಿನಲ್ಲಿ ಆಗಾಗ ಮಳೆ ಸುರಿಯುತ್ತಿದೆ (RAIN). ಸೋಮವಾರ ಸುರಿದ ಮಳೆಯಿಂದ ಅರವಟಗಿ ಬೆಣಚಿ ಮಾರ್ಗದ ಡೋರಿ ಸಮೀಪದಲ್ಲಿ ಹಲವಾರು ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗೆ ಉರುಳಿ, ವಿದ್ಯುತ್, ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಹನಗಳು ಸುತ್ತುವರಿದು ಸಂಚರಿಸುತ್ತಿವೆ. ಡೋರಿ ಗ್ರಾಮದಲ್ಲಿ ದನದ ಕೊಟ್ಟಿಗೆಯ ಮೇಲಿನ ತಗಡುಗಳು ಹಾರಿ ಹೋಗಿದೆ. ತಾಲೂಕಿನಲ್ಲಿ ಆಗಾಗ ವಿದ್ಯುತ್ ಕಡಿತಗೊಳ್ಳುವುದು ಸಾಮಾನ್ಯವಾಗಿದೆ. ಕಳೆದ ವಾರ ಪಟ್ಟಣದಲ್ಲಿ ಎರಡು ಮನೆಗಳ ತಗಡಿನ ಛಾವಣಿ ಹಾರಿ ಹೋಗಿದ್ದವು, ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಕಗ್ಗತ್ತಲಿನಲ್ಲಿ ದಿನ ಕಳೆಯುವಂತಾಗಿತ್ತು.