ಬಿತ್ತಿದ ಬೆಳೆಯನ್ನೇ ಹರಗುವ ದುಸ್ಥಿತಿ crop

crop ಯರಿನಾರಾಯಣಪುರ ಹೊರವಲಯದಲ್ಲಿ ಶೇಂಗಾ ಬೆಳೆಯನ್ನು ಟ್ರಾ್ಯಕ್ಟರ್​ನಿಂದ ಹರಗಿದ ರೈತ.
crop ಯರಿನಾರಾಯಣಪುರ ಹೊರವಲಯದಲ್ಲಿ ಶೇಂಗಾ ಬೆಳೆಯನ್ನು ಟ್ರಾ್ಯಕ್ಟರ್​ನಿಂದ ಹರಗಿದ ರೈತ.
Published on
ವಿಧಾನ ಪರಿಷತ್ ಮುಖ್ಯಸಚೇತಕ ಎನ್. ರವಿಕುಮಾರ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡ ಬುಧವಾರ ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು.
ಯರಿ ನಾರಾಯಣಪುರದಲ್ಲಿ ರೈತನೊಬ್ಬ ಶೇಂಗಾ ಬೆಳೆಯನ್ನು ಹರಗುತ್ತಿದ್ದರು. ಸಾಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತಿದ್ದೇವೆ. ಆದರೆ, ಮಳೆ ಬಾರದೇ ತೊಂದರೆಗೀಡಾಗಿದ್ದೇವೆ. ಸಾಲ ತೀರಿಸುವುದು ಒಂದೆಡೆ ಇರಲಿ, ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಬರ ಬಿದ್ದು ತಿಂಗಳುಗಳೇ ಗತಿಸಿದರೂ ಸರ್ಕಾರದ ಯಾವೊಬ್ಬ ಅಧಿಕಾರಿಯೂ ರೈತರ ಅಳಲು ಕೇಳಲು ಬಂದಿಲ್ಲ. ಜನಪ್ರತಿನಿಧಿಗಳು ರೈತರ ಅಳಲು ಕೇಳುತ್ತಿಲ್ಲ ಎಂದು ಕಣ್ಣೀರು ಹಾಕಿದರು.
ಇಂಗಳಳ್ಳಿಯಲ್ಲಿ ಕುಡಿಯುವ ನೀರಿಗೆ ಏಕೈಕ ಮೂಲವಾಗಿರುವ ಕೆರೆ ಬತ್ತಿ ಹೋಗುವ ಹಂತದಲ್ಲಿ ಇದೆ. ಕೆಸರು ಮಿಶ್ರಿತ ನೀರನ್ನೇ ಗ್ರಾಮಸ್ಥರು ಕುಡಿಯುತ್ತಿದ್ದಾರೆ ಎಂದು ಇಂಗಳಳ್ಳಿ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರತಿ ಎಕರೆಗೆ 20-30 ಸಾವಿರ ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದೇವೆ. ಸರಿಯಾಗಿ ಮಳೆಯಾಗಿದ್ದರೆ 20 ಕ್ವಿಂಟಲ್ ಹೆಸರು ಬರುತ್ತಿತ್ತು. ಈಗ 10 ಕೆಜಿಯೂ ಬರುತ್ತಿಲ್ಲ ಎಂದರು.
ಬಂದಿರುವ ಹೆಸರು, ಶೇಂಗಾ ಬಿಡಿಸಬೇಕೆಂದರೆ ಕೂಲಿ ಕಾರ್ವಿುಕರಿಗೆ ಕೊಡುವ ಹಣವನ್ನೂ ಹೆಚ್ಚುವರಿಯಾಗಿ ಕೈಯಿಂದ ಕೊಡಬೇಕಾಗಿದೆ. ಬೆಳೆವಿಮೆ ಅಧಿಕಾರಿಗಳು ಭೇಟಿ ನೀಡುವವರೆಗೆ ಹೊಲದಲ್ಲಿ ಬೆಳೆಗಳನ್ನು ಬಿಟ್ಟಿದ್ದೇವೆ. ನಂತರ ಎಲ್ಲವನ್ನೂ ಹರಗುತ್ತೇವೆ ಎಂದರು.
ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಲಿಂಗರಾಜ ಪಾಟೀಲ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ರೈತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net