ಜಿಲ್ಲೆಯಲ್ಲಿ 46 ಸಾವಿರ ರಾಸುಗಳು ಇಳಿಕೆ

Occasional
Occasional
Published on
ಜಗದೀಶ ಹೊಂಬಳಿ ಧಾರವಾಡ
ರೈತರು ಯಾಂತ್ರಿಕೃತ ಬದುಕಿಗೆ ಹೊಂದಿಕೊಳ್ಳುತ್ತಿರುವುದರಿAದ ರೈತ ಸ್ನೇಹಿಯಾಗಿರುವ ಜಾನುವಾರುಗಳ ಸಂಖ್ಯೆ ಕ್ರಮೇಣ ತಗ್ಗುತ್ತಿದೆ. ಕಳೆದ ಐದು ವರ್ಷದಲ್ಲಿ ಜಿಲ್ಲೆಯಲ್ಲಿ 46 ಸಾವಿರದಷ್ಟು ಜಾನುವಾರುಗಳ ಸಂಖ್ಯೆ ಇಳಿಕೆ ಕಂಡಿದೆ.
ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹೋರಿಗಳು, ಎತ್ತುಗಳ ಸಂಖ್ಯೆಯೂ ಕಡಿಮೆ ಆಗುತ್ತಲೇ ಇದೆ. 2019ರಲ್ಲಿ ನಡೆದ 20ನೇ ಜಾನುವಾರು ಗಣತಿ ವೇಳೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ 2.30 ಲಕ್ಷ ಜಾನುವಾರುಗಳಿದ್ದವು. ಆ ಸಂಖ್ಯೆ ಈಗ 1,84,000ಕ್ಕೆ ಇಳಿದಿದೆ. ಅಂದರೆ 46 ಸಾವಿರದಷ್ಟು ಕ್ಷೀಣಿಸಿದೆ. ಕಳೆದ ಏಪ್ರಿಲ್‌ನಲ್ಲಿ ಪಶುಪಾಲನೆ ಮತ್ತು ಪಶೈವೈದ್ಯಕೀಯ ಸೇವಾ ಇಲಾಖೆ ಅಽಕಾರಿಗಳು ಕೈಗೊಂಡ ಕಾಲುಬಾಯಿ ಲಸಿಕಾ ಅಭಿಯಾನ ವೇಳೆ ಅಂಕಿ-ಸAಖ್ಯೆಗಳು ಲಭ್ಯವಾಗಿವೆ. 2024ರ ಸೆ.21ರಿಂದ ದೇಶಾದ್ಯಂತ 21ನೇ ಜಾನುವಾರು ಗಣತಿ ನಡೆದಿದೆ. ಗಣತಿಯ ಅಂಕಿ ಸಂಖ್ಯೆಯ ವಿವರಗಳನ್ನು ಅಽಕಾರಿಗಳು ಕೇಂದ್ರ ಪಶುಸಂಗೋಪನಾ ಇಲಾಖೆಗೆ ಸಲ್ಲಿಸಿದ್ದು, ವರದಿ ಬರುವುದು ಬಾಕಿ ಇದೆ.
ಅಣ್ಣಿಗೇರಿಯಲ್ಲಿ 7,189 ಜಾನುವಾರುಗಳು!:
ಆಕಳು, ಎತ್ತು, ಹೋರಿ, ಎಮ್ಮೆ, ಕೋಣ ಸೇರಿ ಜಿಲ್ಲೆಯಲ್ಲಿ ಒಟ್ಟು 1,84,046 ಜಾನುವಾರುಗಳಿವೆ ಎನ್ನುವುದು ಕಾಲುಬಾಯಿ ಲಸಿಕಾ ಅಭಿಯಾನದ ವೇಳೆ ಅಽಕಾರಿಗಳಿಗೆ ಲಭ್ಯವಾದ ಅಂಕಿ-ಸ0ಖ್ಯೆ. ಆ ಪ್ರಕಾರ ಧಾರವಾಡ ತಾಲೂಕಿನಲ್ಲಿ 51,665 ಜಾನುವಾರುಗಳಿವೆ. ಕಲಘಟಗಿ ತಾಲೂಕಿನಲ್ಲಿ 44,126, ಹುಬ್ಬಳ್ಳಿ ಗ್ರಾಮೀಣದಲ್ಲಿ 22,184, ಕುಂದಗೋಳ 21,550, ನವಲಗುಂದ 15,368, ಹುಬ್ಬಳ್ಳಿ ಶಹರ 14,246, ಅಳ್ನಾವರ 7,717 ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ 7,189 ಜಾನುವಾರುಗಳಿವೆ.
ಮನುಷ್ಯ, ಮಣ್ಣು ಆರೋಗ್ಯಕ್ಕೆ ಜಾನುವಾರು ಅಗತ್ಯ
ಮನುಷ್ಯ ಮತ್ತು ಭೂಮಿ ಆರೋಗ್ಯ ಕಾಪಾಡುವುದಕ್ಕಾದರೂ ಜಾನುವಾರುಗಳು ಅತ್ಯಗತ್ಯವಾಗಿವೆ. ಹಾಲು, ತುಪ್ಪು ಹಾಲಿನ ಉಪಉತ್ಪನ್ನಗಳಿಂದ ಮನುಷ್ಯ ಆರೋಗ್ಯವಾಗಿರುತ್ತಾನೆ. ಅದೇ ರೀತಿ ಜಾನುವಾರುಗಳ ಸೆಗಣಿ, ಕೊಟ್ಟಿಗೆ ಗೊಬ್ಬರದಿಂದ ಭೂಮಿಯ ಆರೋಗ್ಯವೂ ಸುಧಾರಣೆಯಾಗಿ ಗುಣಮಟ್ಟದ ಆಹಾರ ಧಾನ್ಯ ಬೆಳೆಯಬಹುದು. ಈ ಎಲ್ಲ ದೃಷ್ಟಿಯಿಂದ ಜಾನುವಾರುಗಳು ಅತ್ಯಗತ್ಯ ಎಂದು ತಜ್ಞರು ಹೇಳುತ್ತಾರೆ.
ಜಾನುವಾರು ತಳಿ ಅಭಿವೃದ್ಧಿ
ಜಾನುವಾರು ಸಂತತಿ ವೃದ್ಧಿಸುವುದಕ್ಕೆ ಇಲಾಖೆಯು ಜಿಲ್ಲೆಯ ಪ್ರಾಥಮಿಕ ಪಶು ಚಿಕಿತ್ಸಾಲಯ, ಪಶು ಚಿಕಿತ್ಸಾಲಯ, ಪಶು ಆಸ್ಪತ್ರೆ, ಸಂಚಾರಿ ಪಶು ಚಿಕಿತ್ಸಾಲಯ ಸೇರಿ 116 ಕೇಂದ್ರಗಳಲ್ಲಿ ಕೃತಗರ್ಭಧಾರಣೆಗೆ ಮಾಡುತ್ತಿದ್ದಾರೆ. ಈ ಪ್ರದೇಶಗಳಿಗೆ ಅವಶ್ಯವಿರುವ ಜಾನುವಾರು ತಳಿ ಅಭಿವೃದ್ಧಿಯಲ್ಲಿ ಅಽಕಾರಿಗಳು ತಲ್ಲೀನರಾಗಿದ್ದಾರೆ. ಪ್ರಮುಖವಾಗಿ ಜರ್ಸಿ, ಎಚ್.ಎಫ್., ಕಿಲಾರ, ಹಳ್ಳಿಕಾರ, ಗಿರ್ ಆಕಳು ತಳಿ ಹಾಗೂ ಎಮ್ಮೆಯಲ್ಲಿ ಕುರ್ತಿ, ಮೂರಾ ಬೆಳೆಸಲು ಕ್ರಮ ವಹಿಸಲಾಗಿದೆ. ನಿರುದ್ಯೋಗಿ ಯುವಕರಿಗೆ ಜಾನುವಾರು ಕೃತಕ ಗರ್ಭದಾರಣೆಯ ಅಗತ್ಯ ಮಾಹಿತಿ ನೀಡಿ ಅಣಿಗೊಳಿಸಲಾಗಿದೆ. ಇಷ್ಟೆಲ್ಲ ಕ್ರಮ ಕೈಗೊಳ್ಳುತ್ತಿದ್ದರೂ ಬಹಳಷ್ಟು ಜನರು ಜಾನುವಾರು ಸಾಕಾಣಿಕೆಗೆ ಮುಂದು ಬರುತ್ತಿಲ್ಲ ಎಂದು ಅಽಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
1.9 ಲಕ್ಷ ಡೋಸ್ ಲಸಿಕೆ ಸಂಗ್ರಹ
ರಾಷ್ಟಿçÃಯ ಕಾಲು ಬಾಯಿ ರೋಗ ನಿಯಂತ್ರಣಕ್ಕೆ 8ನೇ ಸುತ್ತಿನ ಲಸಿಕೆ ಅಭಿಯಾನ ನ.3ರಿಂದ ಆರಂಭವಾಗಿದ್ದು, ಡಿ.02ರವರೆಗೆ ನಡೆಯಲಿದೆ. 1.9 ಲಕ್ಷ ಡೋಸ್ ಲಸಿಕೆ ಸರಬರಾಜಾಗಿದ್ದು, ಸಿರಿಂಜ್, ಪ್ರಚಾರ ಸಾಮಗ್ರಿ, ತುರ್ತು ಔಷಧ ಸಂಗ್ರಹಿಸಲಾಗಿದೆ. 2030ರೊಳಗೆ ರೋಗ ನಿರ್ಮೂಲನೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಎಲ್ಲ ಗ್ರಾಮ, ಪಟ್ಟಣ ಸೇರಿ 100 ಜಾನುವಾರು ಸೇರುವ 1,779 ಬ್ಲಾಕ್‌ಗಳನ್ನಾಗಿ ನಿಗದಿಪಡಿಸಲಾಗಿದೆ. 110 ತಂಡ ರಚಿಸಿದ್ದು, ಇಬ್ಬರು ಲಸಿಕೆದಾರರ ಒಂದು ತಂಡ ಪ್ರತಿ ದಿನ ಒಂದು ಬ್ಲಾಕ್‌ಗೆ ಭೇಟಿ ನೀಡಿ ಲಸಿಕೆ ನೀಡುತ್ತಿದೆ.
"

ಜಾನುವಾರು ಸಂತತಿ ವೃದ್ಧಿಸುವುದಕ್ಕೆ ನಮ್ಮ ಇಲಾಖೆಯಿಂದ ಜಾಗೃತಿ ಮೂಡಿಸುತ್ತಿದ್ದೇವೆ. ಜಿಲ್ಲೆಯಾದ್ಯಂತ ಲಸಿಕಾಭಿಯಾನದಂತಹ ಶಿಬಿರ ಮಾಡುವ ವೇಳೆ ಕೃಷಿಕರಿಗೆ ಜಾನುವಾರುಗಳ ಮಹತ್ವ, ಅವುಗಳನ್ನು ಬೆಳೆಸುವ ಕುರಿಂತೆ ಅರಿವು ಮೂಡಿಸುತ್ತಿದ್ದೇವೆ. ಸದ್ಯ ರಾಷ್ಟಿçÃಯ ಕಾಲು ಬಾಯಿ ರೋಗ ನಿಯಂತ್ರಣದ 8ನೇ ಸುತ್ತಿನ ಲಸಿಕೆ ನಡೆದಿದ್ದು, ಪ್ರಗತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net