Ramalinga ಕಲಿಯುಗದ ಕಾಮಧೇನು ರಾಮಲಿಂಗ ಕಾಮದೇವರು

 Ramalingaನವಲಗುಂದ ಶ್ರೀ ರಾಮಲಿಂಗೇಶ್ವ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಶಿರಹಟ್ಟಿ ಫಕೀರ ಸಿದ್ಧರಾಮ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು
Ramalingaನವಲಗುಂದ ಶ್ರೀ ರಾಮಲಿಂಗೇಶ್ವ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಶಿರಹಟ್ಟಿ ಫಕೀರ ಸಿದ್ಧರಾಮ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು
Published on
ನವಲಗುಂದ: ನವಲಗುಂದ: ಪಟ್ಟಣದ ರಾಮಲಿಂಗ ಕಾಮದೇವನ ದೇಗುಲ ಅತ್ಯಂತ ಜಾಗೃತ ದೇವಸ್ಥಾನ. ಬೇಡಿದವರ ಬೇಡಿಕೆಗಳನ್ನು ಈಡೇರಿಸುವ ಕಲಿಯುಗದ ಕಾಮಧೇನು ಇದ್ದಂತೆ ಎಂದು ಶಿರಹಟ್ಟಿ ಭಾವೈಕ್ಯ ಮಹಾಸಂಸ್ಥಾನ ಪೀಠದ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು. ಪಟ್ಟಣದ ರಾಮಲಿಂಗ ( Ramalinga) ದೇವಾಲಯದ ಕಳಸಾರೋಹಣ, ಕಾರ್ಯಾಲಯ, ಯಾತ್ರಿ ನಿವಾಸ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಇಷ್ಟಾರ್ಥ ಸಿದ್ಧಿ ದಯಪಾಲಿಸುವ ಕಾಮದೇವನಿಗೆ ದೇವಾಲಯ ಇರುವುದು ನವಲಗುಂದದಲ್ಲಿ ಮಾತ್ರ. ಇದು ನವಲಗುಂದದ ಹಿರಿಮೆ. ರಾಮಲಿಂಗೇಶ್ವರ ಕಾಮದೇವನಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಸಕಲ ಸೌಲಭ್ಯ ಕಲ್ಪಿಸುತ್ತಿರುವ ಕಮಿಟಿ ಸದಸ್ಯರ ಕಾರ್ಯ ಶ್ಲಾಘನೀಯ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net