ಅನಂತವಾಗಿದೆ ಮನುಷ್ಯ ಧರ್ಮ religion

religion ಹುಬ್ಬಳ್ಳಿಯ ಕಲಬುರ್ಗಿ ಮಠದಲ್ಲಿ ಬಸವ ಕೇಂದ್ರದಿಂದ ಆಯೋಜಿಸಿದ್ದ ವಚನ ಶ್ರಾವಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಬಸವಲಿಂಗ ಸ್ವಾಮೀಜಿ, ಶ್ರೀ ಚರಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸಾವಕಾರ, ಪ್ರೊ. ಜಿ.ಬಿ. ಹಳಿಯಾಳ, ಇತರರಿದ್ದರು.
religion ಹುಬ್ಬಳ್ಳಿಯ ಕಲಬುರ್ಗಿ ಮಠದಲ್ಲಿ ಬಸವ ಕೇಂದ್ರದಿಂದ ಆಯೋಜಿಸಿದ್ದ ವಚನ ಶ್ರಾವಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಬಸವಲಿಂಗ ಸ್ವಾಮೀಜಿ, ಶ್ರೀ ಚರಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸಾವಕಾರ, ಪ್ರೊ. ಜಿ.ಬಿ. ಹಳಿಯಾಳ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರ್ಗಿ ಮಠದಲ್ಲಿ ಬಸವ ಕೇಂದ್ರದಿಂದ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮ
  • ಜೀವನ ಮತ್ತು ಧರ್ಮ ಎರಡನ್ನೂ ಸಮತೋಲನವಾಗಿ ಮುನ್ನಡೆಸಿದಾಗ ಬದುಕು ಬಂಗಾರ
  • ಧರ್ಮ ಎಂಬುದು ಹಾಲಿನಲ್ಲಿರುವ ತುಪ್ಪದಂತೆ
ಹೇಮಂತ ನಗರದ ಕದಳಿ ಬಳಗ ಮತ್ತು ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಲಬುರ್ಗಿ ಮಠದಲ್ಲಿ ಬಸವ ಕೇಂದ್ರದಿಂದ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಧರ್ಮ ಎಂಬುದು ಹಾಲಿನಲ್ಲಿರುವ ತುಪ್ಪದಂತೆ, ಕಟ್ಟಿಗೆಯಲ್ಲಿರುವ ಬೆಂಕಿಯಂತೆ, ಹೂವಿನಲ್ಲಿರುವ ಮಕರಂದಂತೆ, ಕತ್ತಲನ್ನು ಹೋಗಲಾಡಿಸುವ ಜ್ಯೋತಿಯಂತೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಚರಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಜೀವನ ಮತ್ತು ಧರ್ಮ ಎರಡನ್ನೂ ಸಮತೋಲನವಾಗಿ ಮುನ್ನಡೆಸಿದಾಗ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.
ಅತಿಥಿಯಾಗಿದ್ದ ಪ್ರೊ. ಜಿ.ಬಿ. ಹಳಿಯಾಳ ಮಾತನಾಡಿ, ವಚನ ಶ್ರಾವಣ ಮಹತ್ವವನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಸಾಹುಕಾರ ಮಾತನಾಡಿದರು.
ಕದಳಿ ಬಳಗದ ಸುನಂದಾ ಗಡಾದ ಮತ್ತು ಸುವರ್ಣ ಸಾವಕಾರ ಅವರಿಂದ ವಚನ ಗಾಯನ ಏರ್ಪಡಿಸಲಾಗಿತ್ತು.
ರಾಜೇಶ್ವರಿ ಕಟ್ಟಿಮನಿ, ಆನಂದ ಉಪ್ಪಿನ, ಅಜ್ಜಪ್ಪ ಬೆಂಡಿಗೇರಿ, ಬಸವರಾಜ ಸುಳ್ಳದ, ಮುರುಗೇಶ ಯಕಲಾಸಪುರ, ಇತರರಿದ್ದರು. ಪ್ರಾಂಶುಪಾಲ ಡಾ. ಲಿಂಗರಾಜ ಮುಳ್ಳಳ್ಳಿ ಸ್ವಾಗತಿಸಿದರು. ಎ.ಎಸ್. ಇನಾಮತಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net