ಫ.ಗು. ಹಳಕಟ್ಟಿಯವರ ಆದರ್ಶಗಳು ಅನುಕರಣೀಯ

ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಭವನದಲ್ಲಿ ಡಾ. ಫ.ಗು. ಹಳಕಟ್ಟಿ ಜನ್ಮದಿನ ಕಾರ್ಯಕ್ರಮ ಜರುಗಿತು.
ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಭವನದಲ್ಲಿ ಡಾ. ಫ.ಗು. ಹಳಕಟ್ಟಿ ಜನ್ಮದಿನ ಕಾರ್ಯಕ್ರಮ ಜರುಗಿತು.
Published on
ಧಾರವಾಡ: ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಸಾವಿರಾರು ವಚನಗಳನ್ನು ಸಂಗ್ರಹಿಸಲು ಜೀವನ ಮುಡಿಪು ಇಟ್ಟ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಆದರ್ಶಗಳು ಅನುಕರಣೀಯ ಎಂದು ಶರಣ ಸಾಹಿತಿ ಶಂಭು ಹೆಗಡಾಳ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಭವನದಲ್ಲಿ ಏರ್ಪಡಿಸಿದ್ದ ಹಳಕಟ್ಟಿ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನ್ಯಾಯಾಂಗದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು ಸಂಪತ್ತು ಗಳಿಸುವತ್ತ ಆಸಕ್ತಿ ತೋರಲಿಲ್ಲ. ಜ್ಞಾನ ಸಂಪತ್ತು ಕ್ರೋಢಿಕರಣ, ವಚನ ಸಾಹಿತ್ಯವನ್ನು ಅಜರಾಮರಗೊಳಿಸಲು ಉಪವಾಸ, ವನವಾಸ ಅನುಭವಿಸಿದ ಹಳಕಟ್ಟಿ, ಸಕಲರಿಗೂ ದಾರಿದೀಪ ಆಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಸವ ಶಾಂತಿ ಮಿಷನ್​ ಸಂಸ್ಥಾಪಕ ಅಧ್ಯಕ್ಷ ಮಹಾದೇವ ಹೊರಟ್ಟಿ ಮಾತನಾಡಿ, ರಾಜ್ಯಾದ್ಯಂತ ಓಡಾಡಿ ಸಂಗ್ರಹಿಸಿದ ವಚನಗಳ ಮುದ್ರಣಕ್ಕೆ ಅಗತ್ಯವಿದ್ದ ಮುದ್ರಾಣಾಲಯ ಖರೀದಿಸಲು ಇದ್ದ ಮನೆ ಮಾರಿ ಬಾಡಿಗೆ ಮನೆಯಲ್ಲಿದ್ದ ಮಹಾನುಭಾವ ಹಳಕಟ್ಟಿ ಪ್ರಾತಃಸ್ಮರಣೀಯ ಮಹಾನುಭಾವರು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕೆ.ಎಸ್​. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರ್ವಹಿಸಿದರು. ಮಧುಮತಿ ಸಣಕಲ್ಲ, ವಿಶ್ವನಾಥ ಅಂಗಡಿ, ಮಹಾಂತೇಶ ನರೇಗಲ್ಲ, ಅನಿಲ ಧಾರವಾಡಕರ, ಸುಜಾತಾ ಧಾರವಾಡಕರ, ಗಣೇಶ ಜೋಶಿ, ಚಿಂತನ ಹತ್ತಿಕಾಳ ಎಸ್​.ಎಸ್​. ದೊಡಮನಿ, ಇತರರಿದ್ದರು.
ಗಗನ ಮಹಿಳಾ ಮಂಡಳ, ಶ್ರೀನಗರ ಮಹಿಳಾ ಮಂಡಳ, ಸ್ನೇಹಬಳಗ ಮಹಿಳಾ ಮಂಡಳ, ಜೇನುಗೂಡು ಮಹಿಳಾ ಮಂಡಳ, ಭೂಮಿಕಾ ಮಹಿಳಾ ಮಂಡಳ ಸದಸ್ಯರು ವಿವಿಧ ಶರಣರ ವಚನ ಗಾಯನ ಪ್ರಸ್ತುತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net