ಸಮಸ್ಯೆ ಪರಿಹರಿಸಲಿದೆ ‘ಗ್ಯಾರಂಟಿ’ 'Guarantee' ಸಮಿತಿ

ಉಪ್ಪಿನಬೆಟಗೇರಿ ಗ್ರಾಪಂ ಹಾಗೂ ಪಂಚ ಗ್ಯಾರಂಟಿ 'Guarantee' ಅನುಷ್ಠಾನ ಪ್ರಾಧಿಕಾರದಿಂದ ಸ್ಥಳೀಯ ಶ್ರೀಗುರು ವಿರೂಪಾಕ್ಷೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆ ಶಿಬಿರವನ್ನು ಗ್ರಾಪಂ ಅಧ್ಯಕ್ಷ ಬಸೀರಅಹ್ಮದ್ ಮಾಳಗಿಮನಿ ಉದ್ಘಾಟಿಸಿದರು. ಶಿವಲೀಲಾ ಕುಲಕರ್ಣಿ, ಮಂಜುನಾಥ ಮಸೂತಿ, ಅರವಿಂದ ಏಗನಗೌಡರ ಇತರರಿದ್ದರು.
ಉಪ್ಪಿನಬೆಟಗೇರಿ ಗ್ರಾಪಂ ಹಾಗೂ ಪಂಚ ಗ್ಯಾರಂಟಿ 'Guarantee' ಅನುಷ್ಠಾನ ಪ್ರಾಧಿಕಾರದಿಂದ ಸ್ಥಳೀಯ ಶ್ರೀಗುರು ವಿರೂಪಾಕ್ಷೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆ ಶಿಬಿರವನ್ನು ಗ್ರಾಪಂ ಅಧ್ಯಕ್ಷ ಬಸೀರಅಹ್ಮದ್ ಮಾಳಗಿಮನಿ ಉದ್ಘಾಟಿಸಿದರು. ಶಿವಲೀಲಾ ಕುಲಕರ್ಣಿ, ಮಂಜುನಾಥ ಮಸೂತಿ, ಅರವಿಂದ ಏಗನಗೌಡರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಹೇಳಿಕೆ
ಉಪ್ಪಿನಬೆಟಗೇರಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಗ್ಯಾರಂಟಿ 'Guarantee' ಅನುಷ್ಠಾನ ಸಮಿತಿ ಕಾರ್ಯ ನಿರ್ವಹಿಸುತ್ತಿದೆ ಎಂದು ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಹೇಳಿದರು. 
ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ವತಿಯಿಂದ ಗ್ರಾಮದ ಶ್ರೀಗುರು ವಿರೂಪಾಕ್ಷೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
ಗ್ಯಾರಂಟಿ ಯೋಜನೆಗಳಿಂದ ವಂಚಿತರಾದವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಲ್ಲವೇ ಗ್ಯಾರಂಟಿ ಸಮಿತಿಯವರಿಗೆ ತಿಳಿಸಬೇಕು. ಅವರು ನಿಮ್ಮ ಸಮಸ್ಯೆಗಳಿಗೆ ಸ್ಪಂದನೆ ನೀಡಿ ಪರಿಹರಿಸುವ ಕಾರ್ಯ ಮಾಡುತ್ತಾರೆ ಎಂದರು.
ಧಾರವಾಡ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ, ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಉಪಯೋಗ ಪಡೆಯುತ್ತಿದ್ದಾರೆ. ಈ ಯೋಜನೆಗಳಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗಿದೆ ಎಂದರು.  
ತಾಪಂ ಇಒ ಗಂಗಾಧರ ಕಂದಕೂರ, ಗ್ರಾಪಂ ಅಧ್ಯಕ್ಷ ಬಸೀರಅಹ್ಮದ್ ಮಾಳಗಿಮನಿ, ಕಾರ್ತಿಕ ಗೋಕಾಕ ಮಾತನಾಡಿದರು. ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗಳು ದೊರೆಯದ ಫಲಾನುಭವಿಗಳು, ಅಧಿಕಾರಿಗಳ ಬಳಿ ತಮ್ಮ ಅಳಲು ತೊಡಿಕೊಂಡರು. 
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಛಾಯಾ ಹೆಗಡೆ, ಪಿಡಿಒ ಮಧುಸೂದನ ದೇಶಪಾಂಡೆ, ಸದಸ್ಯರಾದ ಮಂಜುನಾಥ ಮಸೂತಿ, ಸಾಯಿರಾಬಾನು ಲಾಲ್ಮಿಯಾ, ಮುಸ್ತಾಕಅಹ್ಮದ್ ನದಾಫ್, ಲಕ್ಷ್ಮೀ ಆಯಟ್ಟಿ, ಸಯ್ಯದಸಾಬ್ ಮದನಿ, ಸರೋಜಿನಿ ಮಡಿವಾಳರ, ಶಿವಾನಂದ ಸವಸುದ್ಧಿ, ಸಂಜಯ ಕೊಡಿ, ಕಲ್ಲಪ್ಪ ಬೊಬ್ಬಿ, ರೇಣುಕಾ ಕಳ್ಳಿಮನಿ, ಹೆಸ್ಕಾಂ, ಸಾರಿಗೆ, ಕಂದಾಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net