ಶಿವಾನಂದ ಲಹರಿಯು 100 ಸಂಸ್ಕೃತ ಶ್ಲೋಕಗಳನ್ನೊಳಗೊಂಡಿದೆ. ಇದನ್ನು 1956ರಲ್ಲಿ ವೀರಪ್ಪ ನಾಗಶೆಟ್ಟಿ ಓರ್ವ ಶಿಕ್ಷಕರಾಗಿ ಸಂಸ್ಕೃತದಲ್ಲಿದ್ದ ಸ್ತೋತ್ರ ಗಳನ್ನು ಹಳಗನ್ನಡಕ್ಕೆ ಅನುವಾದಿಸಿದರು. ಹಳಗನ್ನಡ ಇಂದಿನ ತಲೆಮಾರಿನವರಿಗೆ ಓದಲು, ಅರ್ಥ ಮಾಡಿಕೊಳ್ಳಲು ಅಷ್ಟು ಸರಳವಲ್ಲ. ಹೀಗಾಗಿ ಅದನ್ನು ಕನ್ನಡಕ್ಕೆ ಸರಳಾನುವಾದ ಮಾಡುವ ಕಾರ್ಯ ಮಾಡಲಾಗಿದೆ. ದಿ. ವೀರಪ್ಪ ನಾಗಶೆಟ್ಟಿ ಕನ್ನಡ, ಸಂಸ್ಕೃತ, ಹಳೆಗನ್ನಡದ ವಿದ್ವತ್‌ಪೂರ್ಣ ಪಂಡಿತರಾಗಿದ್ದರು. ಮೂರೂ ಭಾಷೆಗಳಲ್ಲಿ ಆಳವಾಗಿ ಅಧ್ಯಯನ ಮಾಡಿ ಅನೇಕ ಅಮೂಲ್ಯ ಕೃತಿ ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.