8 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ದಾಖಲೆಯ ವಿಜಯ ಸಾಧಿಸಿದ ಬಸವರಾಜ ಹೊರಟ್ಟಿ ಅವರನ್ನು ಇತಿ್ತೕಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಫೋನ್ ಮಾಡಿ, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಿದ್ದು ಹಾಸ್ಯಸ್ಪದ ಎಂದು ಟೀಕಿಸಿದ್ದಾರೆ.
ಸಭಾಪತಿಗಳ ಹುದ್ದೆಯು ಸಂವಿಧಾನಾತ್ಮಕವಾಗಿದ್ದು, ಈ ಸ್ಥಾನದ ನಿರ್ಧಾರ ಸದನಗಳಲ್ಲಿ ಆಗುತ್ತದೆಯೇ ಹೊರತು ಪಕ್ಷದ ಲೆಟರ್ ಹೆಡ್ನಲ್ಲಿ ಅಲ್ಲ. ಪಕ್ಷದ ಉಸ್ತುವಾರಿಗಳು ಸಭಾಪತಿ ಹುದ್ದೆಯನ್ನು ಲೆಟರ್ ಹೆಡ್ನಲ್ಲಿ ಘೋಷಿಸಿದ್ದು ಎಷ್ಟು ಸರಿ ? ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ತಿರುಗಾಡುವ ಆ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರು, ಪಕ್ಷದ ಮುಖ್ಯಮಂತ್ರಿಗೆ, ಶಾಸಕರಿಗೆ ಕುರಿತು ಬೋಧಿಸಿಲ್ಲವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಕೇಳಿದ್ದಾರೆ.
ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ರಾಹುಲ್ ಗಾಂಧಿ ಅವರು ಸಂವಿಧಾನವನ್ನು ಮರೆತೆಬಿಟ್ಟರೆ ? ಎಂದು ಪ್ರಶ್ನೆ ಮಾಡಿದ್ದಾರೆ.
ಬಸವರಾಜ ಹೊರಟ್ಟಿ ಅವರು ಸಭಾಪತಿಯಾಗಿ ಯಾವುದೇ ಕಪು್ಪ ಚುಕ್ಕೆ ಇಲ್ಲದೆ ನ್ಯಾಯತವಾಗಿ ಹುದ್ದೆ ಅಲಂಕರಿಸಿ, ಸದನದಲ್ಲಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಹೊರಟ್ಟಿಯವರ ರಾಜೀನಾಮೆ ಕೇಳಿರುವುದು ಅವಮಾನಕರ ಹಾಗೂ ಸಂವಿಧಾನದ ತದ್ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭಾಧ್ಯಕ್ಷರುಗಳನ್ನು ವಿಧಾನ ಪರಿಷತ್ ಹಾಗೂ ವಿಧಾನಸಭೆಗಳಲ್ಲಿ ಶಾಸಕರು ನಿರ್ಧಾರ ಮಾಡುತ್ತಾರೆಯೇ ಹೊರತು ಯಾವುದೇ ಪಕ್ಷಗಳಲ್ಲಿ ಅಲ್ಲ ಎನ್ನುವುದನ್ನು ಕಾಂಗ್ರೆಸ್ಸಿಗರು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಯಾವುದೇ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡಬೇಡಿ, ಸಭಾಪತಿ ಸ್ಥಾನದ ನಿರ್ಧಾರ ವಿಧಾನ ಪರಿಷತ್ನಲ್ಲಿ ನಡೆಯಲಿಯೆಂದು ಬಸವರಾಜ ಹೊರಟ್ಟಿಯವರಿಗೆ ಬಿಜೆಪಿಯವರು ತಿಳಿಸಿದ್ದಾಗಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.