ಬಿಎಲ್​ಒಗಳು ಆತುರದಿಂದ ಕೆಲಸ ಮಾಡಿದ್ದಾರೆ hurry

hurry ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಮುಲ್ಲಾ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಶಮೀಮ ಅಹ್ಮದ ಮುಲ್ಲಾ.
hurry ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಮುಲ್ಲಾ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಶಮೀಮ ಅಹ್ಮದ ಮುಲ್ಲಾ.
Published on

ಪ್ರಮುಖ ಮುಖ್ಯಾಂಶಗಳು

  • ಬಿಎಲ್​ಒಗಳಿಗೆ 2 ರಿಂದ 3 ತಿಂಗಳಾದರೂ ತರಬೇತಿ ನೀಡಬೇಕಿತ್ತು.
  • ಸುಳ್ಳು ದಾಖಲಾತಿಯನ್ನು ಬಿಎಲ್​ಒಗಳು ಎಸ್​ಐಆರ್​ನಲ್ಲಿ ದಾಖಲಿಸಿದ್ದಾರೆ.
  • ರಾಜ್ಯ ಸರ್ಕಾರ ನಕಲಿ ಮತದಾರರ ಪಟ್ಟಿ ಸಿದ್ಧಪಡಿಸುತ್ತಿದೆ
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಲ್​ಒಗಳಿಗೆ 2 ರಿಂದ 3 ತಿಂಗಳಾದರೂ ತರಬೇತಿ ನೀಡಬೇಕಿತ್ತು. ಆದರೆ, ಕೇವಲ 8 ರಿಂದ 10 ದಿನಗಳವರೆಗೆ ಮಾತ್ರ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಬಿಎಲ್​ಒಗಳು ಪ್ರತಿ ಮನೆಗೆ ಭೇಟಿ ನೀಡಿ, ಎಸ್​ಐಆರ್ ಅರ್ಜಿ ನಮೂನೆ ಭರ್ತಿ ಮಾಡಬೇಕಿತ್ತು. ಆದರೆ, ಶಾದಿ ಮಹಲ್, ದೇವಸ್ಥಾನ, ಕಲ್ಯಾಣ ಮಂಟಪ ಸೇರಿದಂತೆ ಒಂದೇ ಸ್ಥಳದಲ್ಲಿ ಕುಳಿತು ಭರ್ತಿ ಮಾಡುತ್ತಿದ್ದರು.
ಕಂಡವರಿಗೆಲ್ಲ ಅರ್ಜಿ ನಮೂನೆ ಹಂಚುತ್ತಿದ್ದರು. ರಾಜ್ಯ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡು, ನಕಲಿ ಮತದಾರರ ಪಟ್ಟಿ ಸಿದ್ಧಪಡಿಸುತ್ತಿದೆ ಎಂದು ಆರೋಪಿಸಿದರು.
ಅನೇಕ ಮನೆಗಳಿಗೆ ಭೇಟಿ ನೀಡದೇ ಮತದಾರರು ಸ್ಥಳಾಂತರಗೊಂಡಿದ್ದಾರೆ ಎಂಬ ಸುಳ್ಳು ದಾಖಲಾತಿಯನ್ನು ಬಿಎಲ್​ಒಗಳು ಎಸ್​ಐಆರ್​ನಲ್ಲಿ ದಾಖಲಿಸಿದ್ದಾರೆ.
ಎಸ್​ಐಆರ್ ಅರ್ಜಿ ನಮೂನೆ ಹಂಚುವ ಪ್ರಕ್ರಿಯೆಯನ್ನು ಆ. 31ರವರೆಗೆ ಮುಂದೂಡಬೇಕು. ಆಕ್ಷೇಪಣೆ ಸಲ್ಲಿಸಲು ಇನ್ನೂ 3 ತಿಂಗಳ ಅವಕಾಶ ನೀಡಬೇಕು ಎಂದು ಚುನಾವಣೆ ಆಯೋಗಕ್ಕೆ ಮನವಿ ಮಾಡಿದರು.
ಶಂಕರ ಭೋಜಗಾರ, ಸದಾನಂದ ತೇರದಾಳ, ಗಂಗಾಧರ ಪೆರೂರ, ಮೌಲಾಲಿ ಮುಲ್ಲಾ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net