ಫ್ಲೈ ಓವರ್ ಕಾಮಗಾರಿಯಲ್ಲಿ ತಾಂತ್ರಿಕ ದೋಷ flyover

flyover ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ವೀಕ್ಷಿಸಿದ ಇಂಡಿಯನ್ ಕಾಂಕ್ರೀಟ್ ಇನ್​ಸ್ಟಿಟ್ಯೂಟ್ ಮತ್ತು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ತಂಡ.
flyover ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ವೀಕ್ಷಿಸಿದ ಇಂಡಿಯನ್ ಕಾಂಕ್ರೀಟ್ ಇನ್​ಸ್ಟಿಟ್ಯೂಟ್ ಮತ್ತು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ಸುಧಾರಿತ ತಾಂತ್ರಿಕ ಮಾನಗಳನ್ನು ಪಾಲಿಸುತ್ತಿಲ್ಲ.
  • ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗಿದೆ
  • ಕಬ್ಬಿಣದ ಸರಳುಗಳು ತುಕ್ಕು ಹಿಡಿಯುತ್ತಿವೆ.
ಇಂಡಿಯನ್ ಕಾಂಕ್ರೀಟ್ ಇನ್​ಸ್ಟಿಟ್ಯೂಟ್ ಮತ್ತು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ತಂಡ ಇತ್ತೀಚೆಗೆ ಫ್ಲೈ ಓವರ್ ಕಾಮಗಾರಿ ಪರಿಶೀಲಿಸಿ, ಅಲ್ಲಿನ ಲೋಪದೋಷಗಳನ್ನು ಬಹಿರಂಗಪಡಿಸಿದೆ.
ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಕಬ್ಬಿಣದ ಸರಳುಗಳು ತುಕ್ಕು ಹಿಡಿಯುತ್ತಿವೆ. ಮೇಲ್ಸೇತುವೆ ನಿರ್ವಣದ ಸಂದರ್ಭದಲ್ಲಿ ಕಾಂಕ್ರಿಟ್ ಹಾಕದೆ ಕಬ್ಬಿಣದ ರಾಡ್​ಗಳನ್ನು ಹಾಗೆಯೇ ವರ್ಷಾನುಗಟ್ಟಲೇ ತೆರದ ಗಾಳಿಯಲ್ಲಿ ಬಿಡುವುದು ರಚನಾತ್ಮಕ ಮತ್ತು ಸುರಕ್ಷತೆ ದೃಷ್ಟಿಯಿಂದ ಗಂಭೀರ ಸಮಸ್ಯೆಯಾಗಿದೆ.
ಮುಂದಿನ ದಿನಗಳಲ್ಲಿ ಕಾಂಕ್ರಿಟ್ ಸಾಮರ್ಥ್ಯ ಹಾಗೂ ಇಡೀ ಫ್ಲೈ ಓವರ್​ನ ಆಯುಷ್ಯ ಕುಂದಿಸಲಿದೆ ಮತ್ತು ಕುಸಿಯುವ ಭೀತಿ ಇದೆ ಎಂದು ತಂಡದ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮೇಲ್ಸೇತುವೆ ನಿರ್ಮಾಣದಲ್ಲಿ ಯಾವುದೇ ಸುಧಾರಿತ ತಾಂತ್ರಿಕ ಮಾನಗಳನ್ನು ಪಾಲಿಸುತ್ತಿಲ್ಲ. ಜೀವದ ಹಂಗು ತೊರೆದು ಕೆಲಸ ಮಾಡುವ ಕಾರ್ವಿುಕರಿಗೆ ಕನಿಷ್ಠ ಸುರಕ್ಷತಾ ಸಾಧನಗಳಾದ ಹೆಲ್ಮೇಟ್, ಸೇಫ್ಟಿ ನೆಟ್, ಸೇಫ್ಟಿ ಗಾಗಲ್ಸ್ ಹಾಗೂ ಇನ್ನಿತರ ಸಲಕರಣೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಫ್ಲೈ ಓವರ್ ಕೆಳಗಿನ ರಸ್ತೆಗಳನ್ನು ದುರಸ್ತಿ ಮಾಡದೇ ಗುಂಡಿ ಬಿದ್ದಿವೆ. ಕಾಮಗಾರಿಯ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಾಕಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ತಿಳಿಸಿದ್ದಾರೆ.
ಫ್ಲೈ ಓವರ್ ಕಾಮಗಾರಿ ವಿಳಂಬದಿಂದಾಗಿ ಚನ್ನಮ್ಮ ವೃತ್ತ ಹಾಗೂ ಸುತ್ತಲಿನ ವ್ಯಾಪಾರಸ್ಥರು ಗ್ರಾಹಕರಿಲ್ಲದೇ ಕಂಗಾಲಾಗಿದ್ದಾರೆ.
ವಾಹನ ಸವಾರರು ಸರಾಗವಾಗಿ ಸಾಗಲು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಈ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸಬೇಕು.
ಫ್ಲೈ ಓವರ್ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಮುಗಿಸಬೇಕು ಎಂದು ಇನ್​ಸ್ಟಿಟ್ಯೂಟ್ ಚೇರ್ಮನ್ ಸುರೇಶ ಕಿರೇಸೂರ, ಇನ್​ಸ್ಟಿಟ್ಯೂನ್ ಹುಬ್ಬಳ್ಳಿ ಸೆಂಟರ್ ಚೇರ್ಮನ್ ಉಳಿವೆಪ್ಪ ಸುಣಗಾರ, ಸಂಗಮೇಶ ಹೊರಗಿನಮಠ, ವಸಂತ ಪಾಲನಕರ ಹಾಗೂ ಇತರ ಸಿವಿಲ್ ಇಂಜಿನಿಯರ್​ಗಳು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net