Tavi treatment ಸೆಕ್ಯೂರ್​ ಆಸ್ಪತ್ರೆಯಲ್ಲಿ ಟಾವಿ ಅಡ್ವಾನ್ಸ್​ ಚಿಕಿತ್ಸೆ

Tavi treatment ಸೆಕ್ಯೂರ್ ಆಸ್ಪತ್ರೆ ವೈದ್ಯರಿಂದ ಮಾಹಿತಿ.
Tavi treatment ಸೆಕ್ಯೂರ್ ಆಸ್ಪತ್ರೆ ವೈದ್ಯರಿಂದ ಮಾಹಿತಿ.
Published on

ಪ್ರಮುಖ ಮುಖ್ಯಾಂಶಗಳು

  • ಹುಬ್ಬಳ್ಳಿಯಲ್ಲೂ ಲಭ್ಯವಾದ ಆಧುನಿಕ ಸೌಲಭ್ಯ
  • ಹೃದ್ರೋಗಿಗಳಿಗೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಪರ್ಯಾಯ ಚಿಕಿತ್ಸೆ
ಹುಬ್ಬಳ್ಳಿ: Tavi treatment ವಿಶ್ವಮಟ್ಟದ ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವೆ ನೀಡುತ್ತಿರುವ ಇಲ್ಲಿಯ ಗೋಕುಲ ರಸ್ತೆ ಸೆಕ್ಯೂರ್​ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಪರ್ಯಾಯ ಚಿಕಿತ್ಸೆ ಒದಗಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ ಎಂದು ಡಾ. ಶರತ್​ ವಿಜಾಪುರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದ್ರೋಗದಿಂದ ಬಳಲುತ್ತಿದ್ದ 75 ವರ್ಷದ ಮಹಿಳೆಗೆ ಅತ್ಯಾಧುನಿಕ ಟಾವಿ (ಟ್ರಾನ್ಸ್​ಕ್ಯಾಥೆಟರ್​ ಆರ್ಟಿಕ್ ವಾಲ್ವ್​ ಇಂಪ್ಲಾಂಟೇಷನ್​) ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸಲಾಗಿದೆ ಎಂದು ಹೇಳಿದರು.
ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗದ ರೋಗಿಗಳಿಗೆ ಇದು ಪರ್ಯಾಯ ಚಿಕಿತ್ಸೆಯಾಗಿದೆ. ಅಸಮರ್ಥ ಅಥವಾ ಗಾಯ ತಡೆದುಕೊಳ್ಳದ ರೋಗಿಗಳಿಗೆ ಈ ವಿಧಾನ ಬಳಸಬಹುದು. ಕಾಲಿನ ರಕ್ತನಾಳದ ಮೂಲಕ ಸಣ್ಣ ಕೊಳವೆ (ಕ್ಯಾಥೆಟರ್​) ಬಳಸಿ ಸಮಸ್ಯೆಯಾದ ಹೃದಯದ ಭಾಗದಲ್ಲಿ ವಾಲ್ವ್​ ಅಳವಡಿಸಲಾಗುತ್ತದೆ. ಇದರಿಂದ ದೊಡ್ಡ ಗಾಯವಾಗುವುದಿಲ್ಲ. ತೀವ್ರ ರಕ್ತಸ್ರಾವ ಹಾಗೂ ಹೆಚ್ಚು ನೋವು ಸಹ ಉಂಟಾಗುವುದಿಲ್ಲ. ಈ ಚಿಕಿತ್ಸೆಯಲ್ಲಿ ರೋಗಿ ಶೀಘ್ರ ಗುಣಮುಖವಾಗುವುದರಿಂದ ಹೆಚ್ಚಿನ ಸಮಸ್ಯೆಯಾಗುವುದಿಲ್ಲ ಎಂದರು.
ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಾಧುನಿಕ ಹೃದಯ ಚಿಕಿತ್ಸೆಯನ್ನು ಸ್ಥಳಿಯವಾಗಿ ಲಭ್ಯವಾಗುವಂತೆ ಮಾಡುವುದು ಸೆಕ್ಯೂರ್​ ಆಸ್ಪತ್ರೆಯ ಗುರಿಯಾಗಿದೆ. ಈ ಮೊದಲು ಅತ್ಯಾಧುನಿಕ ಸೌಲಭ್ಯಕ್ಕಾಗಿ ಹಾಗೂ ಶಸ್ತ್ರಚಿಕಿತ್ಸೆಗೆ ಬೆಂಗಳೂರು, ಮುಂಬೈಗೆ ತೆರಳುತ್ತಿದ್ದ ರೋಗಿಗಳಿಗೆ ಇನ್ನು ಮುಂದೆ ಹುಬ್ಬಳ್ಳಿಯಲ್ಲಿಯೇ ಅಂತಹ ಸೌಲಭ್ಯ ದೊರೆಯಲಿದೆ. ಇದರಿಂದ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಸಮಯ ಹಾಗೂ ಹಣ ಉಳಿತಾಯವಾಗಲಿದೆ ಎಂದರು.
ಡಾ. ಮಾರಿಸ್​ ಸೆರಿಕ್ಕೋ, ಡಾ. ಉಲ್ಲಾಸ್​ ಬಿ. ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net