Talent ಸನಾ ಕಾಲೇಜಿನಲ್ಲಿ ಟ್ಯಾಲೆಂಟ್​ ಸರ್ಚ್​ ಪರೀಕ್ಷೆ

Talent ಹುಬ್ಬಳ್ಳಿಯ ಸನಾ ಕಾಲೇಜಿನಲ್ಲಿ ಟ್ಯಾಲೆಂಟ್ ಸರ್ಚ್ ಪರೀಕ್ಷೆಯ ಫಲಕಗಳನ್ನು ಕವಿವಿ ಕುಲಪತಿ ಎ.ಎಂ. ಖಾನ್ ಅನಾವರಣಗೊಳಿಸಿದರು.
Talent ಹುಬ್ಬಳ್ಳಿಯ ಸನಾ ಕಾಲೇಜಿನಲ್ಲಿ ಟ್ಯಾಲೆಂಟ್ ಸರ್ಚ್ ಪರೀಕ್ಷೆಯ ಫಲಕಗಳನ್ನು ಕವಿವಿ ಕುಲಪತಿ ಎ.ಎಂ. ಖಾನ್ ಅನಾವರಣಗೊಳಿಸಿದರು.
Published on
ಹುಬ್ಬಳ್ಳಿ: talent ಸನಾ ಶಾಹೀನ್​ ಟ್ಯಾಲೆಂಟ್​ ಸರ್ಚ್​ ಮುಖ್ಯ ಪರೀಕ್ಷೆ 2025ಅನ್ನು ಡಿ. 7ರಂದು ಬೆಳಗ್ಗೆ 10.30ಕ್ಕೆ ಇಲ್ಲಿಯ ಭೈರಿದೇವರಕೊಪ್ಪದ ಶಾಂತಿನಿಕೇತನದಲ್ಲಿರುವ ಸನಾ ಶಾಹಿನ್​ ಪಿಯು ಕಾಲೇಜಿನಲ್ಲಿ ಏರ್ಪಡಿಸಲಾಗಿದೆ. 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.
ಸವಣೂರು, ಬಂಕಾಪುರ, ಗದಗ, ಹಿರೇಕೆರೂರು, ಹಾನಗಲ್​, ಕನವಳ್ಳಿ, ಹಳಿಯಾಳ ಮತ್ತು ದಾಂಡೇಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಪರೀಕ್ಷೆಗಾಗಿ ವ್ಯವಸ್ಥೆ ಮಾಡಲಾಗಿದೆ.
ಪ್ರಶ್ನೆ ಪತ್ರಿಕೆಯು ಕನ್ನಡ, ಇಂಗ್ಲಿಷ್​ ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿರುತ್ತದೆ. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಎಂ. ಖಾನ್​ ಅವರು ಪರೀಕ್ಷೆಯ ಪ್ರಚಾರ ಫಲಕಗಳನ್ನು ಶುಕ್ರವಾರ ಬಿಡುಗಡೆ ಮಾಡಿದರು.
ಸನಾ ಸಂಸ್ಥೆಯ ಅಧ್ಯಕ್ಷ ಎಂ.ಎಂ. ಮಳಗಿ, ವ್ಯವಸ್ಥಾಪಕ ಟ್ರಸ್ಟಿ ಅಶ್ರಫ್​ ಅಲಿ ಬಶೀರ ಅಹಮದ್​, ಟ್ರಸ್ಟಿ ಮೊಹಮ್ಮದ್​ ಆಯೂಬ್​ ಸವಣೂರು, ತಾರಿಕ್​ ಮುಜಾಹಿದ್​, ಸರ್ಫರಾಝ್​ ಅತ್ತಾರ್​ ಹಾಗೂ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.
ನೋಂದಣಿ ಮಾಡದ ವಿದ್ಯಾರ್ಥಿಗಳು ನೇರವಾಗಿ ವಾಕ್​-ಇನ್​ ಮೂಲಕ ಪರೀಕ್ಷೆಯಲ್ಲಿ ಭಾಗವಹಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net