ಪ್ರೇರಣಾ (Prerana) ಪಿಯು ಕಾಲೇಜಿನಲ್ಲಿ ಟ್ಯಾಲೆಂಟ್ ಎಕ್ಸ್​ಪೋ

ಹುಬ್ಬಳ್ಳಿಯ ಪ್ರೇರಣಾ (Prerana) ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಟ್ಯಾಲೆಂಟ್ ಎಕ್ಸ್​ಪೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪ್ರೊ. ಕೆ.ಬಿ. ಮೇವುಂಡಿಮಠ, ಉಮೇಶ ಬೊಮ್ಮಕ್ಕನವರ ಹಾಗೂ ಇತರರಿದ್ದರು.
ಹುಬ್ಬಳ್ಳಿಯ ಪ್ರೇರಣಾ (Prerana) ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಟ್ಯಾಲೆಂಟ್ ಎಕ್ಸ್​ಪೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪ್ರೊ. ಕೆ.ಬಿ. ಮೇವುಂಡಿಮಠ, ಉಮೇಶ ಬೊಮ್ಮಕ್ಕನವರ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳೆಲ್ಲ ಸಾಧಕರ ಸಾಲಿಗೆ ಸೇರಿರಿ
  • ವಿದ್ಯಾರ್ಥಿಗಳು ಜೀವನ ಉಜ್ವಲಗೊಳಿಸಿಕೊಳ್ಳಬೇಕು
  • ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ
ಹುಬ್ಬಳ್ಳಿ : ಇಲ್ಲಿನ ವಿದ್ಯಾನಗರದ ಕೆಎಲ್​ಇ ಸಂಸ್ಥೆಯ ಪ್ರೇರಣಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಮತ್ತು ಡಿಜಿಟಲ್ ಕ್ವಿಜ್ ‘ಟ್ಯಾಲೆಂಟ್ ಎಕ್ಸ್​ಪೋ-2025’ ಅನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಅತಿಥಿಯಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್. ಎಸ್. ಕೆಳದಿಮಠ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಪರಿಚಯವಾಗುತ್ತದೆ. ಸಾಧನೆ ಕೇವಲ ಸಾಧಕರ ಸೊತ್ತು ಎಂಬಂತೆ ವಿದ್ಯಾರ್ಥಿಗಳೆಲ್ಲ ಸಾಧಕರ ಸಾಲಿಗೆ ಸೇರಿರಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಕೆಎಲ್​ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಒತ್ತಾಸೆಯಂತೆ ಕೆಎಲ್​ಇಯ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಜೀವನ ಉಜ್ವಲಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪ್ರೊ. ಕೆ. ಬಿ. ಮೇವುಂಡಿಮಠ ಮಾತನಾಡಿ, ಮಹಾವಿದ್ಯಾಲಯದ ಶೈಕ್ಷಣಿಕ ಯೋಜನೆಗಳನ್ನು ವಿವರಿಸಿದರು.
ಬಿಇಒ ಉಮೇಶ ಬೊಮ್ಮಕ್ಕನವರ ಅತಿಥಿಯಾಗಿದ್ದರು. ಪಿ. ಸಿ. ಜಾಬಿನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ವಿಠ್ಠಲ ವಾಘ್ಮೋಡೆ ಹಾಗೂ ಹಿರಿಯ ಉಪನ್ಯಾಸಕ ಡಾ. ದೀಪಕ ಮುನವಳ್ಳಿ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.
ವಿವಿಧ ಶಾಲೆಗಳ 36 ತಂಡಗಳು ಭಾಗವಹಿಸಿದ್ದವು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net