ಜಮೀನಿನ ದಾಖಲೆ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ

Protest by Tadasinakoppa villagers
Protest by Tadasinakoppa villagers
Published on
ಧಾರವಾಡ: ಧಾರವಾಡ ಹೊರವಲಯದ ತಡಸಿನಕೊಪ್ಪ ಗ್ರಾಮದಲ್ಲಿ ಸರ್ಕಾರ ಮಂಜೂರು ಮಾಡಿದ್ದ ರೈತರ 102 ಎಕರೆ ಜಮೀನಿನ ದಾಖಲೆಗಳನ್ನು ಸರಿ ಮಾಡಿಕೊಡಬೇಕು ಎಂದು ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
1993- 94ರಲ್ಲಿ ಅಕ್ರಮ ಸಕ್ರಮ ಸಮಿತಿ 151 ಜನ ರೈತರಲ್ಲಿ 95 ಬಡ ರೈತರನ್ನು ಗುರುತಿಸಿ ಮಂಜೂರು ಮಾಡಲಾಗಿತ್ತು. ಜಮೀನನ್ನು 15 ವರ್ಷ ಪರಭಾರೆ ಮಾಡದಂತೆ ಷರತ್ತು ವಿಧಿಸಲಾಗಿತ್ತು. 2003ರಲ್ಲೇ ಅಂದಿನ ಉಪ ವಿಭಾಗಾಧಿಕಾರಿ ದರಖಾಸ್ತು ಪೋಡಿ ಆದೇಶ ಹೊರಡಿಸಿದ್ದರೂ ಅನುಷ್ಠಾನ ಆಗಿರಲಿಲ್ಲ. 163 ಎಕರೆ ಪೈಕಿ 61 ಎಕರೆ ಜಮೀನನ್ನು ಜಿಲ್ಲಾಡಳಿತ 2013ರಲ್ಲಿ ಐಐಐಟಿಗೆ ನೀಡಿ, ಉಳಿದ 102 ಎಕರೆ ಜಮೀನನ್ನು ಪೋಡಿ ಮಾಡಿ ದಾಖಲೆ ಸರಿಪಡಿಸಿಕೊಡುವ ಭರವಸೆ ನೀಡಿತ್ತು. ಹಲವು ವರ್ಷಗಳಿಂದ ಬಾಕಿ ಇರುವ ಈ ಪ್ರಕ್ರಿಯೆ ಕೈಗೊಂಡು ದಾಖಲೆಗಳನ್ನು ಸರಿ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net