ತಡಸಿನಕೊಪ್ಪ ಶೂಟೌಟ್​ ಪ್ರಕರಣದ ಪ್ರಮುಖ ಆರೋಪಿ ಸುಂದರ್​ ಪೌಲ್​ ಬಂಧನ

ಸುಂದರ್​ ಪೌಲ್
ಸುಂದರ್​ ಪೌಲ್
Published on
ಧಾರವಾಡ: ನಗರ ಹೊರವಲಯದ ತಡಸಿನಕೊಪ್ಪ ಸರಹದ್ದಿನ ಜಮೀನಿನಲ್ಲಿ ಮೇ 26ರಂದು ನಡೆದಿದ್ದ ಫೈರಿಂಗ್​ ಪ್ರಕರಣದ ಪ್ರಮುಖ ಆರೋಪಿ ಸುಂದರ್​ ಪೌಲ್​ನನ್ನು ಹುಬ್ಬಳ್ಳಿ- ಧಾರವಾಡ ನಗರ ಪೊಲೀಸರು ತಮಿಳುನಾಡಿನ ನಾಗಪಟ್ಟಣಂದಲ್ಲಿ ಮಂಗಳವಾರ ಬಂಧಿಸಿದ್ದಾರೆ.
ತಡಸಿನಕೊಪ್ಪ ವಿವಾದಿತ ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ಸುಂದರ್​ ಪಾಲ್​ ಹಾಗೂ ಇನ್ನೊಬ್ಬ ವಿಠ್ಠಲ ವಾಲೀಕಾರ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದರು. ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೇ 27ರಂದು ಫಿಲೋಮಿನಾ, ಪ್ರವಿಣ ಸುತಾರ, ಇಂದ್ರಪಾಲ್​ ಸಿಂಗ್​, ಬೆಂಜಮಿನ್​, ವಿಶಾಲ ಜಾಧವ ಎಂಬುವರನ್ನು ಬಂಧಿಸಿದ್ದರು.
ಆದರೆ, ಪ್ರಮುಖ ಆರೋಪಿ ಸುಂದರ್​ ಪೌಲ್​ ಪರಾರಿಯಾಗಿದ್ದ. ಬೆಂಗಳೂರು, ತಮಿಳುನಾಡಿನ ಕೊಡೈಕೆನಾಲ್​, ಗೋವಾ, ಜಾರ್ಖಂಡ್​, ಓಡಿಶಾದ ಗೋಪಾಲಪುರ, ಪಶ್ಚಿಮ ಬಂಗಾಳದ ಸಿಲಿಗುರಿ, ಉತ್ತರ ಪ್ರದೇಶದ ಗೋರಖಪುರ, ವಾರಾಣಸಿ ಮತ್ತು ನೇಪಾಳ ದೇಶದಲ್ಲಿ ಸುತ್ತಾಡಿದ್ದ. ಈತನ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ಪೊಲೀಸ್​ ತಂಡ, ತಮಿಳುನಾಡಿನ ನಾಗಪಟ್ಟಣಂನಲ್ಲಿ ಗುರುತು ಮರೆಮಾಚಿ ಆಶ್ರಯ ಪಡೆದಿದ್ದ ಸುಂದರ್​ ಪೌಲ್​ನನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net