ಹುಬ್ಬಳ್ಳಿ: ಗುರು ಪೌರ್ಣಿಮೆ ನಿಮಿತ್ತ ಸ್ವರ ನಾದ swara naada ಸಂಗೀತ ವಿದ್ಯಾಲಯ ವತಿಯಿಂದ ಇಲ್ಲಿಯ ಲಿಂಗರಾಜ ನಗರದ ಶ್ರೀ ಕಟ್ಟಿ ಮಂಗಳಮ್ಮದೇವಿ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ಗುರು ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗೀತಾ ಮಹಾದೇವಪ್ಪನವರ ಉದ್ಘಾಟಿಸಿದರು.
ವಿದುಷಿ ಶಶಿಕಲಾ ದಾನಿ ಅವರಿಗೆ ಶಿಷ್ಯಂದಿರು ಸಂಗೀತ ನಮನ ಅರ್ಪಿಸಿ ಗೌರವಿಸಿದರು. ಸುಜ್ಞಾನ ಹಾಗೂ ವಂದನಾ ದಾನಿ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದ ಜುಗಲಬಂದಿ ನಡೆಸಿಕೊಟ್ಟರು.
ಸಹನಾ ಹಾಗೂ ಮಂಜರಿ ನಿರೂಪಿಸಿದರು. ಕಲಾವತಿ ಅಂಬಲಿ ವಂದಿಸಿದರು.