Golf ಗಾಲ್ಪ್ ಗ್ರೌಂಡ್​ನ ಸ್ವಾಮಿ ವಿವೇಕಾನಂದ ಮೂರ್ತಿ ತೆರವು

Golf ಹುಬ್ಬಳ್ಳಿಯ ಗಾಲ್ಪ್ ಗ್ರೌಂಡ್​ನಲ್ಲಿನ ಸ್ವಾಮಿ ವಿವೇಕಾನಂದರ ಮೂರ್ತಿ ತೆರವುಗೊಳಿಸಿದ್ದಕ್ಕೆ ಹಾಗೂ ವಾಯು ವಿಹಾರಕ್ಕೆ ಅವಕಾಶ ನೀಡದಿರುವುದನ್ನು ಖಂಡಿಸಿ ವಾಯು ವಿಹಾರಿಗಳು ಪ್ರತಿಭಟನೆ ನಡೆಸಿದರು.
Golf ಹುಬ್ಬಳ್ಳಿಯ ಗಾಲ್ಪ್ ಗ್ರೌಂಡ್​ನಲ್ಲಿನ ಸ್ವಾಮಿ ವಿವೇಕಾನಂದರ ಮೂರ್ತಿ ತೆರವುಗೊಳಿಸಿದ್ದಕ್ಕೆ ಹಾಗೂ ವಾಯು ವಿಹಾರಕ್ಕೆ ಅವಕಾಶ ನೀಡದಿರುವುದನ್ನು ಖಂಡಿಸಿ ವಾಯು ವಿಹಾರಿಗಳು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ ನಡೆಸಿದ ವಾಯುವಿಹಾರಿಗಳು, ವಿಎಚ್​ಪಿ ಕಾರ್ಯಕರ್ತರು.
  • ರೈಲ್ವೆ ಅಧಿಕಾರಿಗಳ ವರ್ತನೆ ಖಂಡಿಸಿದರು.
  • ಮೂರ್ತಿ ಮರು ಪ್ರತಿಷ್ಠಾಪನೆ ಮಾಡುವಂತೆ ಒತ್ತಾಯ.
ಮಂಗಳವಾರ ಬೆಳಗ್ಗೆ ಎಂದಿನಂತೆ ಗಾಲ್ಪ್ ಗ್ರೌಂಡ್​ಗೆ ವಾಯು ವಿವಹಾರಕ್ಕೆ ತೆರಳಿದ್ದವರನ್ನು ಆರ್​ಪಿಎಫ್ ಸಿಬ್ಬಂದಿ ತಡೆದರು.
ಇದರಿಂದ ಆಕ್ರೋಶಗೊಂಡ ವಾಯುವಿಹಾರಿಗಳು, ಗಾಲ್ಪ್ ಗ್ರೌಂಡ್​ನಲ್ಲಿ ವಾಯು ವಿಹಾರಕ್ಕೆ ಅವಕಾಶ ಕೊಡುವಂತೆ ಒತ್ತಾಯಿಸಿದರು.
ಗಾಲ್ಪ್ ಗ್ರೌಂಡ್​ನಲ್ಲಿದ್ದ ಬನ್ನಿ ಮಹಾಕಾಳಿ ದೇವಸ್ಥಾನ ಹಾಗೂ ಸ್ವಾಮಿ ವಿವೇಕಾನಂದರ ಮೂರ್ತಿ ತೆರವುಗೊಳಿಸಿದ್ದನ್ನು ಖಂಡಿಸಿ, ದೇವಸ್ಥಾನ ಮರು ನಿರ್ಮಾಣ ಹಾಗೂ ಮೂರ್ತಿ ಮರು ಪ್ರತಿಷ್ಠಾಪನೆ ಮಾಡುವಂತೆ ಒತ್ತಾಯ ಮಾಡಿದರು.
ನಂತರ ಗಾಲ್ಪ್ ಮೈದಾನ ಹಾಗೂ ಹುಬ್ಬಳ್ಳಿ ರೈಲ್ವೆ ವಿಭಾಗೀಯ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ರೈಲ್ವೆ ಅಧಿಕಾರಿಗಳ ವರ್ತನೆ ಖಂಡಿಸಿದರು.
ಸ್ವಾಮಿ ವಿವೇಕಾನಂದ ಮೂರ್ತಿ ತೆರವುಗೊಳಿಸಿದ್ದಕ್ಕೆ ಸಮರ್ಪಕ ಉತ್ತರ ನೀಡಲು ನಿರಾಕರಿಸಿದ ರೈಲ್ವೆ ಅಧಿಕಾರಿಗಳು ಹಾಗೂ ಪರಿಷತ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಶನಿವಾರದೊಳಗೆ ಬನ್ನಿ ಮಹಾಕಾಳಿ ದೇವಸ್ಥಾನ ನಿರ್ವಿುಸಿ, ಸ್ವಾಮಿ ವಿವೇಕಾನಂದ ಮೂರ್ತಿ ಮರು ಪ್ರತಿಷ್ಠಾಪಿಸುವ ಹಾಗೂ ವಾಯು ವಿಹಾರಿಗಳಿಗೆ ಮತ್ತೆ ಅವಕಾಶ ಮಾಡಿಕೊಡುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದರು. ಬೆಳಗ್ಗೆ ಗಾಲ್ಪ್ ಗ್ರೌಂಡ್ ಎದುರು ನಡೆದ ಪ್ರತಿಭಟನೆಯಲ್ಲಿ ಪ್ರಭು ನವಲಗುಂದಮಠ, ಬಸವರಾಜ ಕುಂದಗೋಳಮಠ, ವೆಂಕಟೇಶ ಹಬೀಬ, ಬಸವರಾಜ ಶಿರಕೋಳ, ಶೇಖರ ಜಾಧವ ಶಿವಕುಮಾರ ಹೀರೆಮಠ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಜಯತೀರ್ಥ ಕಟ್ಟಿ, ವಿಶ್ವ ಹಿಂದೂ ಪರಿಷತ್​ನ ಸುಭಾಷಸಿಂಗ್ ಜಮಾದಾರ, ಚೇತನ ರಾವ್, ರಮೇಶ ಕದಂ ಹಾಗೂ ಇನ್ನಿತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net