swabhiman divas ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಸ್ವಾಭಿಮಾನ ದಿನ ಆಚರಣೆಯಲ್ಲಿ ಅಂಗವಿಕಲರಿಗೆ ಕೃತಕ ಕಾಲು ವಿತರಿಸಲಾಯಿತು. ಗೃಹ ಸಚಿವ ಡಾ. ಜಿ. ಪರಮೇಶ್ವರ, ಸಚಿವ ಎಚ್.ಸಿ. ಮಹದೇವಪ್ಪ, ಶಾಸಕರಾದ ಪ್ರಸಾದ ಅಬ್ಬಯ್ಯ, ಎಫ್.ಎಚ್. ಜಕ್ಕಪ್ಪನವರ, ಫೆಡರೇಶನ್ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ, ರಾಜಶೇಖರ ಮೆಣಸಿನಕಾಯಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಂಗವಿಕಲರಿಗೆ ಕೃತಕ ಕಾಲು ವಿತರಣೆ
ಗೃಹ ಸಚಿವ ಡಾ. ಜಿ. ಪರಮೇಶ್ವರ ಭಾಗಿ
ಹುಬ್ಬಳ್ಳಿ: swabhiman divas ಜೈನ್ ಧರ್ಮವು ಹೇಳಿರುವಂತೆ ಬಾಳು, ಬಾಳಲು ಬಿಡು ಹಾಗೂ ಅಹಿಂಸಾ ಪರಮೋ ಧರ್ಮ ತತ್ವಗಳು ಸಮಾಜದಲ್ಲಿ ಶಾಂತಿ ಸಹಬಾಳ್ವೆಗೆ ಬಹಳ ಮಹತ್ವದ್ದಾಗಿವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಇಲ್ಲಿಯ ಆಲ್ ಇಂಡಿಯಾ ಜೈನ್ ಯೂಥ್ ಫೆಡರೇಷನ್ ವತಿಯಿಂದ ಮಹಾವೀರ ಲಿಂಬ್ ಸೆಂಟರ್ನ 30ನೇ ಸ್ಥಾಪನಾ ವರ್ಷದ ಅಂಗವಾಗಿ ನಗರದ ಕೇಶ್ವಾಪುರದ ಸಂಸ್ಕಾರ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾಭಿಮಾನ ದಿನಾಚರಣೆಯಲ್ಲಿ ಅಂಗವಿಕಲರಿಗೆ ಕೃತಕ ಕಾಲು ವಿತರಿಸಿ ಅವರು ಮಾತನಾಡಿದರು.
ಇದುವರೆಗೂ ಲಿಂಬ್ ಸೆಂಟರ್ ಕೈಗೊಂಡ ಸಾಮಾಜಿಕ ಸೇವಾ ಕಾರ್ಯ ಸ್ಮರಿಸಿದ ಅವರು, ಮಾನವೀಯ ನೆಲೆಯಲ್ಲಿ ಮಾಡುತ್ತಿರುವ ಇಂತಹ ಕೆಲಸಗಳು ನಿರಂತರ ನಡೆಯಬೇಕು ಎಂದು ಆಶಿಸಿದರು.
ಸಾನ್ನಿಧ್ಯ ವಹಿಸಿದ್ದ ಆಚಾರ್ಯ ವಿಮಲಸಾಗರ ಸೂರಿಶ್ವರಜಿ ಮಹಾರಾಜ್ ಅವರು, ಮಾನವನಿಗೆ ನಿಜವಾದ ಸಂತೋಷ ದಾನದಿಂದಲೇ ಸಿಗುತ್ತದೆ. ದಯೆ, ಕರುಣೆ, ಭಕ್ತಿ ಮತ್ತು ಪರೋಪಕಾರದ ಗುಣಗಳಿಂದ ದಾನಭಾವನೆ ಮೂಡುತ್ತದೆ ಎಂದು ಹೇಳಿದರು.
ಪದ್ಮವಿಮಲಸಾಗರಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ಮಹಾವೀರ ಲಿಂಬ್ ಸೆಂಟರ್ ಇತ್ತೀಚಿನ ವರ್ಷಗಳಲ್ಲಿ 350ಕ್ಕೂ ಹೆಚ್ಚು ಶಿಬಿರಗಳ ಮೂಲಕ 55 ಸಾವಿರಕ್ಕೂ ಹೆಚ್ಚು ಅಂಗವಿಕಲರಿಗೆ ಕೃತಕ ಅಂಗಗಳನ್ನು ವಿತರಿಸಿ, ಅವರಿಗೆ ಆತ್ಮನಿರ್ಭರ ಜೀವನಕ್ಕೆ ಪ್ರೇರಣೆ ನೀಡಲಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ, ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಅತಿಥಿಗಳಾಗಿ ಪಾಲ್ಗೊಂಡಿದ್ದರು.