ಹುಬ್ಬಳ್ಳಿ: ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸುತ್ತೂರು ಜಾತ್ರಾ (sutturmath) ಮಹೋತ್ಸವ ನಿಮಿತ್ತ ನಡೆಸಯುತ್ತಿರುವ ಜ್ಯೋತಿ ರಥ ಯಾತ್ರೆಯು ಸೋಮವಾರ ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಆಗಮಿಸಿತು.
ಯಾತ್ರೆಯನ್ನು ಬರಮಾಡಿಕೊಂಡ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಫಲಪುಷ್ಪ ಹಾಗೂ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಮಾತನಾಡಿದ ಅವರು, ಸುತ್ತೂರು ಶ್ರೀಕ್ಷೇತ್ರವು ದೇಶ-ವಿದೇಶದಲ್ಲಿ ಹೆಸರು ಮಾಡಿದೆ. ವೀರಶೈವ ಲಿಂಗಾಯತ ಮಠಗಳಲ್ಲ ಶ್ರೇಷ್ಠ ಮಠವಾಗಿ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.
ಶ್ರೀಗಳು ಅರಸೊತ್ತಿಗೆ ವೇಳೆ ಗುರುಗಳಾಗಿ ಮಾರ್ಗದರ್ಶನ ನೀಡಿದ್ದಾರೆ. ಹಾಗಾಗಿ ರಾಜಗುರು ತಿಲಕ ಬಿರುದು ದಯಪಾಲಿಸಲಾಗಿದೆ. ಇಂಥ ಭವ್ಯ ಪರಂಪರೆ ಹೊಂದಿರುವ ಶ್ರೀಗಳು ಹಾಗೂ ಮಠದಿಂದ ಜಾತ್ರೆ ನಿಮಿತ್ತ ಪರಂಪರಾ ಯಾತ್ರೆಯು ಬಂದಿದೆ. ಜಾತ್ರೆಗೆ ಬನ್ನಿ ಎಂದು ಸರ್ವರನ್ನೂ ಆಹ್ವಾನಿಸುತ್ತಿದೆ ಎಂದರು.