ಜೀವನದಲ್ಲಿ ಬರುವ ಅವಕಾಶ ಬಳಸಿಕೊಂಡು ಯಶಸ್ವಿಯಾಗಿ life

life ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಮಾರ್ಗದರ್ಶಿ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಕೆಎಲ್​ಇ ಹಿರಿಯ ನಿರ್ದೇಶಕರಾಗಿದ್ದ ಶಂಕರಣ್ಣ ಮುನವಳ್ಳಿ, ರಾಜ್ಯಸಭೆ ಸದಸ್ಯ ಡಾ. ಮಾ. ನಾಗರಾಜ, ಎಂಎಲ್​ಸಿ ಲಿಂಗರಾಜ ಪಾಟೀಲ, ಡಾ. ಅಶೋಕ ಶೆಟ್ಟರ ಹಾಗೂ ಇತರರಿದ್ದರು.
life ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಮಾರ್ಗದರ್ಶಿ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಕೆಎಲ್​ಇ ಹಿರಿಯ ನಿರ್ದೇಶಕರಾಗಿದ್ದ ಶಂಕರಣ್ಣ ಮುನವಳ್ಳಿ, ರಾಜ್ಯಸಭೆ ಸದಸ್ಯ ಡಾ. ಮಾ. ನಾಗರಾಜ, ಎಂಎಲ್​ಸಿ ಲಿಂಗರಾಜ ಪಾಟೀಲ, ಡಾ. ಅಶೋಕ ಶೆಟ್ಟರ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕದ ಅಭಿವೃದ್ಧಿಗೆ ಕೈ ಜೋಡಿಸಬೇಕು
  • ಸಮಾಜಮುಖಿ ಸೇವೆ ಮಾಡುವದರಿಂದ ಜೀವನದಲ್ಲಿ ಸಂತೃಪ್ತಿ ದೊರೆಯುತ್ತದೆ
  • ಗ್ರಂಥ ಸಂಪಾದಕರನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿ :
ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ಸಭಾಂಗಣದಲ್ಲಿ ಶಂಕರಣ್ಣ ಮುನವಳ್ಳಿ ಅಮೃತ ಮಹೋತ್ಸವ ಅಭಿನಂದನಾ ಸಮಿತಿ ವತಿಯಿಂದ ಅಯೋಜಿಸಿದ್ದ ‘ಮಾರ್ಗದರ್ಶಿ’ ಗ್ರಂಥ ಲೋಕಾರ್ಪಣೆ ಮತ್ತು ರಾಜ್ಯ ಸಭೆಯ ನೂತನ ಸದಸ್ಯ ಡಾ. ಮಾ. ನಾಗರಾಜ ಮತ್ತು ವಿಧಾನ ಪರಿಷತ್ ನೂತನ ಸದಸ್ಯ ಲಿಂಗರಾಜ ಪಾಟೀಲ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಕೆಎಲ್​ಇ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ಡಾ. ಸುಧಾಮೂರ್ತಿ ಮತ್ತು ಡಾ. ಮಾ. ನಾಗರಾಜ ಅವರು ರಾಜ್ಯ ಸಭೆಯ ಸದಸ್ಯರಾಗಿರುವದಕ್ಕೆ ಸಂತಸ ವ್ಯಕ್ತಪಡಿಸಿ, ಉಭಯತರರು ಕರ್ನಾಟಕದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ನೂತನ ರಾಜ್ಯಸಭಾ ಸದಸ್ಯ ಡಾ. ಮಾ. ನಾಗರಾಜ ಹಾಗೂ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿದರು.
ಕೆಎಲ್​ಇ ಸಂಸ್ಥೆಯ ಹಿರಿಯ ನಿರ್ದೇಶಕರಾಗಿದ್ದ ಶಂಕರಣ್ಣ ಮುನವಳ್ಳಿ ಮಾತನಾಡಿ, ಸಮಾಜಮುಖಿ ಸೇವೆ ಮಾಡುವದರಿಂದ ಜೀವನದಲ್ಲಿ ಸಂತೃಪ್ತಿ ದೊರೆಯುತ್ತದೆ ಎಂದರು.
ಗ್ರಂಥ ಸಂಪಾದಕರಾದ ಪ್ರೊ. ಕೆ.ಎಸ್. ಕೌಜಲಗಿ ಮತ್ತು ಡಾ. ಬಿ.ಎಸ್. ಮಾಳವಾಡ ಅವರನ್ನು ಸನ್ಮಾನಿಸಲಾಯಿತು.
ಕೆಎಲ್​ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಂಜುನಾಥ ಮುನವಳ್ಳಿ ಉಪಸ್ಥಿತರಿದ್ದರು. ವೀರೇಶ ಸಂಗಳದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಎಲ್​ಇ ಕೊ ಆಪ್​ರೇಟಿವ ಆಸ್ಪತ್ರೆಯ ಆಡಳಿತಗಾರ ಡಾ. ವೈ.ಎಫ್. ಹಂಜಿ, ಗೋಪಾಲ ಜೋಶಿ, ಶ್ರೀ ಸಿದ್ಧಾರೂಡಮಠದ ಟ್ರಸ್ಟಿ ಸಿ.ಎ. ಚನ್ನವೀರ ಮುಂಗರವಾಡಿ, ಕೆಎಲ್​ಇ ತಾಂತ್ರಿಕ ವಿವಿ ಉಪಕುಲಪತಿ ಡಾ. ಪಿ.ಜಿ. ತೆವರಿ, ಕುಲಸಚಿವ ಡಾ. ಬಸವರಾಜ ಅನಾಮಿ, ಡೀನ್ ಡಾ. ಬಿ.ಎಲ್. ದೇಸಾಯಿ ಹಾಗೂ ಇತರರಿದ್ದರು.
ನಿವೃತ್ತ ಪ್ರಾಚಾರ್ಯ ಎಸ್.ಬಿ. ನಾಡಗೌಡ ಅವರು ಮಾರ್ಗದರ್ಶಿ ಅಭಿನಂದನಾ ಗ್ರಂಥ ಪರಿಚಯಿಸಿದರು.
ಗಂಗಾವತಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸ್ವಾಗತಿಸಿದರು. ಡಾ. ನೇತ್ರಾವತಿ ಗಬ್ಬೂರ ನಿರೂಪಿಸಿದರು. ತಿಪ್ಪಣ್ಣ ಮಜ್ಜಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net