ಕೆಎಲ್ಇ ಪ್ರೇರಣಾ ರೆಸಿಡೆನ್ಸಿಯಲ್ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2026-27ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯಂಟೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಾನವಾದ ಶಿಕ್ಷಣ ಸಿಗಬೇಕು ಎಂಬುದು ಕೆಎಲ್ಇ ಸಂಸ್ಥೆಯ ಧ್ಯೇಯ.
ವಿದ್ಯಾರ್ಥಿಗಳು ಮೋಬೈಲ್ ಪೋನ್ಗೆ ದಾಸರಾಗದೇ, ಪುಸ್ತಕಗಳಿಗೆ ಸ್ನೇಹಿತರಾಗಬೇಕು. ಗುರಿ ದೊಡ್ಡದಿರಲಿ ಹಾಗೂ ಅದನ್ನು ತಲುಪಲು ಇಂದಿನಿಂದಲೇ ತಯಾರಿಸಿ ನಡೆಸಿ ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ಮಹೇಶ ಮಾಸಾಳ ಮಾತನಾಡಿ, ಪಿಯುಸಿ ಜೀವನದ ಮಹತ್ವದ ತಿರುವಾಗಿದೆ. ಇಲ್ಲಿ ಹಾಕುವ ಅಡಿಪಾಯ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಓದಿನ ಸಲಹೆ ನೀಡಿದ ಆವಂತಿ ಕೋ ಆರ್ಡಿನೇಟರ್ಪ್ರದೀಪ ಶೆಟ್ಟಿ ಮಾತನಾಡಿ, ದಿನದ ಹೆಚ್ಚಿನ ಸಮಯವನ್ನು ಓದಿಗಾಗಿ ಮೀಸಲಿಡಬೇಕು.
ಕಠಿಣ ವಿಷಯಗಳಿಗೆ ಹೆಚ್ಚು ಸಮಯ ನೀಡಬೇಕು. ಪಠ್ಯದಲ್ಲಿ ಸಂಶಯಗಳಿದ್ದರೆ ಶಿಕ್ಷಕರಿಂದ ಪರಿಹರಿಸಿಕೊಳ್ಳಿ. ಗುಂಪು ಚರ್ಚೆ ಮಾಡಿ. ಒಬ್ಬರಿಗೊಬ್ಬರು ಕಲಿತು, ಕಲಿಸಿ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಶ್ರೀನಿವಾಸ ಲಿಕ್ಕಿ, ಕೆಎಲ್ಇ ಪ್ರೇರಣಾ ಕಾಲೇಜು ಕೇವಲ ಅಂಕ ಗಳಿಸುವ ಕಾರ್ಖಾನೆಯಲ್ಲ. ಸಂಪೂರ್ಣ ವ್ಯಕ್ತಿತ್ವ ವಿಕಸನದ ಕೇಂದ್ರವಾಗಿದೆ. ಇಲ್ಲಿ ಶಿಸ್ತು, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಮಂಜುನಾಥ ಕಿತ್ತೂರ ನಿರೂಪಿಸಿದರು. ರೇಖಾ ಹತ್ತಿ ವಂದಿಸಿದರು.