ಪರಿಶ್ರಮದಿಂದ ಯಶಸ್ಸು ಖಚಿತ: ಮಕ್ಕಳಗೇರಿ

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಎಜುಕೇಶನಲ್​ ಸೊಸೈಟಿಯ ನೆಹರು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಮಾಜ ಸೇವಕ ಮಂಜುನಾಥ ಮಕ್ಕಳಗೇರಿ ಗುರುವಾರ ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ ಸಂಚಿಕೆ ಬಿಡುಗಡೆ ಮಾಡಿದರು.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಎಜುಕೇಶನಲ್​ ಸೊಸೈಟಿಯ ನೆಹರು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಮಾಜ ಸೇವಕ ಮಂಜುನಾಥ ಮಕ್ಕಳಗೇರಿ ಗುರುವಾರ ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ ಸಂಚಿಕೆ ಬಿಡುಗಡೆ ಮಾಡಿದರು.
Published on
ಧಾರವಾಡ: ವಿದ್ಯಾರ್ಥಿ ಜೀವನ ಭವಿಷ್ಯವನ್ನು ರೂಪಿಸಿಕೊಳ್ಳುವ ಸುವರ್ಣ ದಿನಗಳು. ಪ್ರತಿಯೊಬ್ಬರೂ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ತಂದೆ- ತಾಯಿಯ ಕನಸುಗಳನ್ನು ಈಡೇರಿಸಲು ಪರಿಶ್ರಮ ಪಡಬೇಕು. ಅಂದಾಗ ಯಶಸ್ಸು ಖಚಿತ ಎಂದು ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿ ಮಂಜುನಾಥ ಮಕ್ಕಳಗೇರಿ ಹೇಳಿದರು.
ತಾಲೂಕಿನ ಹೆಬ್ಬಳ್ಳಿ ಗ್ರಾಮದ ಎಜುಕೇಶನಲ್​ ಸೊಸೈಟಿಯ ನೆಹರು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯ ರೂಪಿಸಲು ತಂದೆ- ತಾಯಿ ಹಗಲಿರುಳು ಶ್ರಮಿಸುತ್ತಾರೆ. ತಮ್ಮ ಕಷ್ಟಗಳನ್ನೆಲ್ಲ ಮರೆ ಮಾಚಿ ಮಕ್ಕಳ ಸುಖ ಜೀವನಕ್ಕಾಗಿ ಅನೇಕ ತ್ಯಾಗ ಮಾಡುತ್ತಾರೆ. ಜೀವನದಲ್ಲಿ ಯಶಸ್ಸು ಗಳಿಸುವ ಮೂಲಕ ಪಾಲಕರ ಋಣ ತೀರಿಸಬೇಕು. ಭಾರತದಲ್ಲಿ ಜನಿಸಿದ್ದು ನಮ್ಮ ಪುಣ್ಯ. ಕೃಷಿ, ವಿಜ್ಞಾನ- ತಂತ್ರಜ್ಞಾನದಲ್ಲಿ ಭಾರತ ಹಲವು ಮೈಲಿಗಲ್ಲು ಸಾಧಿಸುತ್ತಿದೆ. ಭಾರತ ವಿಶ್ವಗುರು ಆಗಲು ವಿದ್ಯಾಥಿರ್ಗಳ ಕೊಡುಗೆಯೂ ಅಗತ್ಯ ಎಂದರು.
ಕಳೆದ ವರ್ಷದ ಎಸ್​ಎಸ್​ಎಲ್​ಸಿ ಪರೀೆ ಲಿತಾಂಶದಲ್ಲಿ ವಿದ್ಯಾಕಾಶಿ ಧಾರವಾಡ ರಾಜ್ಯಕ್ಕೆ 12ನೇ ಸ್ಥಾನ ಪಡೆದಿದೆ. ಆದ್ದರಿಂದ ಎಲ್ಲರೂ ಪರೀಾ ತಯಾರಿ ಮಾಡಿಕೊಂಡು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಜಿಲ್ಲೆಯ ಲಿತಾಂಶ ಹೆಚ್ಚಳಕ್ಕೆ ಕೈ ಜೋಡಿಸಬೇಕು. ಇದಕ್ಕೆ ಪೂರಕವಾಗಿ ವಿಜಯವಾಣಿ ಪತ್ರಿಕೆ ಹೊರತರುತ್ತಿರುವ ವಿದ್ಯಾರ್ಥಿ- ಉದ್ಯೋಗ ಮಿತ್ರ ಓದಬೇಕು. ನಿಮ್ಮ ಯಶಸ್ಸು ಶಾಲೆಗೆ ಕೀರ್ತಿ ತಂದುಕೊಡುತ್ತದೆ ಎಂದರು.
ನೆಹರು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಆರ್​. ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಾಧ್ಯಾಪಕ ಬಸಲಿಂಗಪ್ಪ ತೋಟಗಿ ಸ್ವಾಗತಿಸಿದರು. ಸಂಜೀವ ಕುಂದಗೋಳ ನಿರೂಪಿಸಿದರು. ಸಿಆರ್​ಪಿ ಮಲ್ಲಿಕಾರ್ಜುನ ಉಪ್ಪಿನ, ಶಿಕ್ಷಕರಾದ ನಾಗಪ್ಪ ಕವಳಿ, ದಯಾನಂದ ಆಯಟ್ಟಿ, ಪ್ರಕಾಶ ತುರಮರಿ, ಟಿ. ಮಹಾಂತೇಶ, ಶಾಂತಾ ರಾಠೋಡ, ಶಶಿಕಲಾ, ವಾಣಿ, ಶೀತಲ್​ ಹಾಗೂ ವಿದ್ಯಾಥಿರ್ಗಳು ಉಪಸ್ಥಿತರಿದ್ದರು.
ಇದೇವೇಳೆ ಧಾರವಾಡದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಶಾಲೆಯ ಎಲ್ಲ ವಿದ್ಯಾಥಿರ್ಗಳ ಕಣ್ಣಿನ ತಪಾಸಣೆ ನಡೆಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿ ಹರೀಶ ಮುಂಜಿ, ಮಾರುಕಟ್ಟೆ ವ್ಯವಸ್ಥಾಪಕ ಸಂಜೀವ ಕುಲಕರ್ಣಿ ಹಾಗೂ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net