Students threatened ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಬೆದರಿಕೆ

Students threatened ಕೇಶ್ವಾಪುರ ಪೊಲೀಸ್ ಠಾಣೆ
Students threatened ಕೇಶ್ವಾಪುರ ಪೊಲೀಸ್ ಠಾಣೆ
Published on

ಹುಬ್ಬಳ್ಳಿ: ದ್ವಿಚಕ್ರವಾಹನದಲ್ಲಿ ಬಂದ ಅಪರಿಚಿತರಿಬ್ಬರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ

Students threatened

ನಡೆಸಿದ್ದಲ್ಲದೆ ಜೀವ ಬೆದರಿಕೆ ಹಾಕಿ 1.93 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್, ನಗದು ದೋಚಿಕೊಂಡು ಪರಾರಿಯಾಗಿದ್ದರ ಕುರಿತು ಇಲ್ಲಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳಾದ ರಾಚು ಸಂಗ್ರಾಮ, ಸಮೃದ್ಧ ಹಬೀಬ, ಆರುಷ ಮೇಘರಾಜ ಎಂಬುವವರಿಗೆ ರಾಹುಲ್ ಬಂದಿ, ಸುಧಾಕರ ಟಿ. ಎಂಬುವವರು ಹಲ್ಲೆ ನಡೆಸಿ ಹಣ ದೋಚಿದ್ದಾರೆ.
ಮೂವರು ವಿದ್ಯಾರ್ಥಿಗಳು ಚೈತನ್ಯಾ ಟೆಕ್ನೋ ಸ್ಕೂಲ್ ಹತ್ತಿರ ನಿಂತಾಗ ಇವರಿಬ್ಬರು ಬೈಕ್ ಮೇಲೆ ಬಂದಿದ್ದಾರೆ. ಬಳಿಕ ಇಲ್ಲಿ ಯಾಕೆ ನಿಂತಿದ್ದೀರಿ? ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲಿಂದ ಕುಸುಗಲ್ ಗ್ರಾಮದ ಶ್ರೀನಿ ಢಾಬಾ ಹತ್ತಿರ ಕರೆದೊಯ್ದು ಚಿನ್ನಾಭರಣ, ಮೊಬೈಲ್ ಫೋನ್, ನಗದು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿನಲ್ಲಿ ವಿವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net