ವಿದ್ಯಾರ್ಥಿಗಳಿಂದ (press visit) ಮುದ್ರಣ ಘಟಕ ವೀಕ್ಷಣೆ

ಹುಬ್ಬಳ್ಳಿ ವರೂರಿನ ವಿಜಯವಾಣಿ (press visit) ಮುದ್ರಣ ಘಟಕಕ್ಕೆ ಭೇಟಿ ನೀಡಿದ ನಿರ್ಮಲಾ ಕೆ. ಠಕ್ಕರ್​ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಕ್ಕಳು ಹಾಗೂ ಶಿಕ್ಷಕರು.
ಹುಬ್ಬಳ್ಳಿ ವರೂರಿನ ವಿಜಯವಾಣಿ (press visit) ಮುದ್ರಣ ಘಟಕಕ್ಕೆ ಭೇಟಿ ನೀಡಿದ ನಿರ್ಮಲಾ ಕೆ. ಠಕ್ಕರ್​ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಕ್ಕಳು ಹಾಗೂ ಶಿಕ್ಷಕರು.
Published on
ಹುಬ್ಬಳ್ಳಿ: ಇಲ್ಲಿಯ ನಿರ್ಮಲಾ ಕೆ. ಠಕ್ಕರ್​ (press visit) ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ವಿ.ಎಸ್​. ಪಿಳ್ಳೆ ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ತಾಲೂಕಿನ ವರೂರಿನಲ್ಲಿರುವ ವಿಜಯವಾಣಿ ಮುದ್ರಣ ಘಟಕಕ್ಕೆ ಭೇಟಿ ನೀಡಿ ಹೊಸ ಲೋಕವೊಂದರ ಪರಿಚಯ ಮಾಡಿಕೊಂಡರು.
ಶಾಲೆಯಲ್ಲಿ ನಿತ್ಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿ ಜ್ಞಾನ ವೃದ್ಧಿಸಿಕೊಳ್ಳುವ ವಿದ್ಯಾರ್ಥಿಗಳು ಇಂದು ಕೆಲವು ತಾಂತ್ರಿಕ ವಿಷಯಗಳನ್ನು ಸ್ವತಃ ಕಂಡುಕೊಂಡರು.
ಮಕ್ಕಳಲ್ಲಿ ಎಲ್ಲ ವಿಷಯಗಳಲ್ಲಿ ಕುತೂಹಲವಿರುತ್ತದೆ. ಅದರಲ್ಲೂ ತಂತ್ರಜ್ಞಾನ, ಹೊಸ ಯುಗದ ಆವಿಷ್ಕಾರಗಳ ಬಗ್ಗೆ ಇನ್ನೂ ಅಧಿಕ ಉತ್ಸುಕತೆ ಇರುತ್ತದೆ. ಹಾಗೆಯೇ ವಿಜಯವಾಣಿ ಮುದ್ರಣ ಘಟಕದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಪ್ರಿಂಟಿಂಗ್​ ವ್ಯವಸ್ಥೆಯನ್ನು ಅಚ್ಚರಿಯಿಂದ ಗಮನಿಸಿದರು.
ಹೊಸ ಜ್ಞಾನ ಗಳಿಕೆಯ ಆಶಯದೊಂದಿಗೆ ಬಂದ ವಿದ್ಯಾರ್ಥಿಗಳು ವಿಜಯವಾಣಿ ಮುದ್ರಣ ಟಕದಲ್ಲಿ ಹಲವು ವಿಶೇಷತೆಗಳನ್ನು ಕಂಡರು. ನವೀನ ತಂತ್ರಜ್ಞಾನದ ವಿಜಯವಾಣಿ ಕಲರ್ ಪುಟಗಳು, ವಿನ್ಯಾಸ, ಮುದ್ರಣದೊಂದಿಗೆ ಹೊರಬರುವುದನ್ನು ನೋಡಿ ಬೆರಗಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net