ಎನ್​ಎಂಎಂಎಸ್​ ಪರೀಕ್ಷೆಯಲ್ಲಿ ಧಾರವಾಡ ವಿದ್ಯಾರ್ಥಿಗಳ ಸಾಧನೆ

ಅರ್ಪಿತಾ ನೀಲಪ್ಪ ಕಲ್ಲೂರ
ಅರ್ಪಿತಾ ನೀಲಪ್ಪ ಕಲ್ಲೂರ
Published on
ಧಾರವಾಡ: ನ್ಯಾಷನಲ್​ ಮೀನ್ಸ್​ ಕಮ್​ ಮೆರಿಟ್​ ಸ್ಕಾಲರ್​ಶಿಪ್​ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕರ್ನಾಟಕ ಇಂಕ್ಯುಬೇಶನ್​ ಫೌಂಡೇಶನ್​ ಹಾಗೂ ವಿವಿಧ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ಪಡೆದ 8ನೇ ತರಗತಿಯ 110, ವಿದ್ಯಾಥಿರ್ಗಳಲ್ಲಿ 42 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾರೆ.
ಪರೀೆಯಲ್ಲಿ ಅರ್ಪಿತಾ ನೀಲಪ್ಪ ಕಲ್ಲೂರ ಅವರು 128 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ. ಕರ್ನಾಟಕ ಇಂಕ್ಯುಬೇಶನ್​ ಫೌಂಡೇಶನ್​ ವತಿಯಿಂದ ಧಾರವಾಡ ಗ್ರಾಮೀಣ ಹಾಗೂ ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳ ಸಹಯೋಗದಲ್ಲಿ ಎನ್​ಎಂಎಂಎಸ್​ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಧಾರವಾಡದ ಆದರ್ಶ ವಿದ್ಯಾಲಯ ಧಾರವಾಡ, ಸುಬೋಧ ಶಿಕ್ಷಣ ಸಮಿತಿ, ಅಮೃತ ಅಕಾಡೆಮಿ, ಎಸ್​.ಆರ್​. ತಲ್ಲೂರ ಫೌಂಡೇಷನ್, ರೋಟರಿ ಕ್ಲಬ್​ ಆಫ್​ ಸೆವೆನ್​ ಹಿಲ್ಸ್​, ಎಸ್​ಡಿಎಂ ಕಾಲೇಜ್​ ಆಫ್​ ಇಂಜಿನಿಯರಿಂಗ್​ ಆ್ಯಂಡ್​ ಟೆಕ್ನಾಲಜಿ ಹಾಗೂ ಆರ್​ಎಲ್​ಎಸ್​ ಶಾಲೆ ಸಹಕಾರ ನೀಡಿದ್ದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net