ವಿದ್ಯಾರ್ಥಿಗಳು ವೃತ್ತಿಪರ ಕೌಶಲ್ಯ ಬೆಳೆಸಿಕೊಳ್ಳಿ skills

skills ಹುಬ್ಬಳ್ಳಿ ರಾಯಾಪುರದ ಎಸ್.ಎಜೆ.ಎಂ.ವಿ. ಮಹಾಂತ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಉದ್ಘಾಟಿಸಿದರು.
skills ಹುಬ್ಬಳ್ಳಿ ರಾಯಾಪುರದ ಎಸ್.ಎಜೆ.ಎಂ.ವಿ. ಮಹಾಂತ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗವೆಂಬುದು ಕೇವಲ ಜೀವನೋಪಾಯದ ಸಾಧನವಲ್ಲ
  • ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಕೌಶಲ್ಯವೂ ಅಗತ್ಯ.
  • ಯುವಜನರ ಕನಸುಗಳಿಗೆ, ಪ್ರತಿಭೆಗೆ ಸೂಕ್ತವಾದ ವೇದಿಕೆ
ರಾಯಾಪುರದಲ್ಲಿರುವ ಎಸ್.ಜೆ.ಎಂ.ವಿ. ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಟಿಸಿ, ಪ್ರಥಮ ಎಜುಕೇಶನ್ ಫೌಂಡೇಶನ, ಹಾಸ್ಪಿಟಾಲಿಟಿ ಉದ್ಯೋಗ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಹಾಗೂ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯಭರಿತ ಜೀವನ ತಮ್ಮದಾಗಲಿ ಎಂದು ಉದ್ಯೋಗಾಕಾಂಕ್ಷಿಗಳಿಗೆ ಹಾರೈಸಿದರು.

ಉದ್ಯೋಗ

ಐಟಿಸಿ ಲಿಮಿಟೆಡ್​ನ ಕಾರ್ಯಕ್ರಮ ಅಧಿಕಾರಿ ಮನೋಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಕೌಶಲ್ಯವೂ ಅಗತ್ಯ. ಉದ್ಯೋಗ ಮೇಳಗಳು

ಉದ್ಯೋಗ

ದಾತರು ಮತ್ತು ಉದ್ಯೋ

ಗಾಕಾಂಕ್ಷಿ ಗಳನ್ನು ಒಂದೇ ವೇದಿಕೆಯಲ್ಲಿ ಸಂರ್ಪಸುವ ಕಾರ್ಯಕ್ರಮ ಎಂದು ಹೇಳಿದರು.

ಉದ್ಯೋ

ಗಾಕಾಂಕ್ಷಿಗಳು ಇಂತಹ ಸುವರ್ಣ ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ. ಕನಸುಗಳು ಗರಿಗೆದರಲು ಉದೊ್ಯೕಗ ಮೇಳಗಳು ಅವಕಾಶ ಕಲ್ಪಿಸುತ್ತವೆ. ಶಿಕ್ಷಣದ ಜೊತೆಗೆ ಉತ್ತಮ ಕೌಶಲ್ಯ ರೂಡಿಸಿಕೊಳ್ಳಿ ಎಂದು ತಿಳಿಸಿದರು.

ಪ್ರಥಮ ಎಜುಕೇಶನ್ ಫೌಂಡೇಶನ್ ಸೆಂಟರ್​ನ ಕೇಂದ್ರ ಮುಖ್ಯಸ್ಥ ಪ್ರದೀಪ ಅವರು

ಮೇಳದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

35ಕ್ಕೂ ಹೆಚ್ಚು ಖಾಸಗಿ ಕಂಪನಿಗಳು, 500ಕ್ಕೂ ಹೆಚ್ಚು ಉದೊ್ಯೕಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ವೆಂಕಟರಮಣ ರೆಡ್ಡಿ, ಮುತ್ತುರಾಜ ಆರ್., ಗೀತಾ ಕುಲಕರ್ಣಿ ಹಾಗೂ ಇತರರಿದ್ದರು.

ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸಂಯೋಜಕಿ ಪ್ರೊ. ಜಿ.ಸಿ ಕಡ್ಡಿಪುಡಿ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ. ಜಯಲಕ್ಷ್ಮೀ ಯಂಡಿಗೇರಿ ನಿರೂಪಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಮೇಶ ಸಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net